ಸನಾತನ ಧರ್ಮ ಸಂರಕ್ಷಣೆಗೆ ಶಂಕರಾಚಾರ್ಯರ ಕೊಡುಗೆ ಹಿರಿದು

sgr darmika
ಸಾಗರದ ಭಾರತೀತೀರ್ಥ ಸಭಾಭವನದಲ್ಲಿ ಶಂಕರ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನವಗ್ರಹ ಪೂರ್ವಕ ರುದ್ರಹವನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿ ಕುಮಾರ್ ಮಾತನಾಡಿದರು. ಪಿ.ಎಲ್.ಗಜಾನನಭಟ್, ಮಾ.ಸ.ನಂಜುಂಡಸ್ವಾಮಿ, ಪ್ರೊ. ಕೆ.ಆರ್.ಕೃಷ್ಣಯ್ಯ ಇತರರಿದ್ದರು.
Published on

ಸಾಗರ: ಶಾಂಕರರ ತತ್ವಗಳನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಶಂಕರಮಠ ಮಾಡುತ್ತಿದೆ. ಶಂಕರಾಚಾರ್ಯರ ತತ್ವಗಳನ್ನು ಪಾಲನೆ ಮಾಡುವುದರಿಂದ ಆಧ್ಯಾತ್ಮಿಕವಾಗಿ ನಮ್ಮನ್ನು ನಾವು ಗಟ್ಟಿಗೊಳಿಸಿಕೊಳ್ಳಲು ಸಾಧ್ಯವಿದೆ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿ ಕುಮಾರ್ ಹೇಳಿದರು.
ಸಾಗರದ ಭಾರತೀತೀರ್ಥ ಸಭಾಭವನದಲ್ಲಿ ಸೋಮವಾರ ಶಂಕರ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನವಗ್ರಹ ಪೂರ್ವಕ ರುದ್ರಹವನ ಸಮಾರೋಪದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಂಕರಚಾರ್ಯರ ಹೆಸರೆ ಒಂದು ವಿಶೇಷವಾದ ಶಕ್ತಿ ತಂದು ಕೊಡುತ್ತದೆ. ಶಂಕರ ಜಯಂತಿ ಸಂದರ್ಭದಲ್ಲಿ ಶಾಂಕರ ತತ್ವಗಳನ್ನು ಪಠಣ ಮಾಡುವುದರಿಂದ, ಶ್ರವಣ ಮಾಡುವುದರಿಂದ ಪುಣ್ಯ ಲಭಿಸುತ್ತದೆ. ಸನಾತನ ಧರ್ಮ ಸಂರಕ್ಷಣೆಗಾಗಿ ಶಂಕರಾಚಾರ್ಯರು ಮಾಡಿರುವ ಕೆಲಸ ಸ್ಮರಣೀಯವಾದದ್ದು ಎಂದರು.
ಸಾಗರದಲ್ಲಿ ಶೃಂಗೇರಿ ಶಂಕರಮಠ ಪ್ರಾರಂಭವಾಗಿ 25 ವರ್ಷವಾಯಿತು. ಇದು 25ನೇ ಶಂಕರ ಜಯಂತಿಯಾಗಿರುವುದರಿಂದ ಅನೇಕ ಧಾರ್ಮಿಕ ಕಾರ್ಯಕ್ರಮವನ್ನು ಮಠದಿಂದ ಹಮ್ಮಿಕೊಳ್ಳಲಾಗಿದೆ. ಪ್ರತಿ ತಿಂಗಳು ಶಾಂಕರ ತತ್ವ ಪ್ರಸರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಠದ ಸಂಪೂರ್ಣ ಅಭಿವೃದ್ಧಿಗೆ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಶೃಂಗೇರಿ ಶ್ರೀಗಳ ಮಾರ್ಗದರ್ಶನದಲ್ಲಿ ಮಠದ ಪರಿಪೂರ್ಣ ಅಭಿವೃದ್ಧಿಗೆ ಅಗತ್ಯ ಸಿದ್ಧತೆ ನಡೆಸಲಾಗಿದೆ. ಭಕ್ತರ ಸಹಕಾರದಿಂದ ನಮ್ಮೆಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ಮುನ್ನಡೆದಿದೆ ಎಂದರು.
ಸದಾಶಿವ ಜೋಯ್ಸ, ವಿದ್ವಾನ್ ಪಿ.ಎಲ್.ಗಜಾನನಭಟ್, ಮಾ.ಸ.ನಂಜುಂಡಸ್ವಾಮಿ, ಪ್ರೊ. ಕೆ.ಆರ್.ಕೃಷ್ಣಯ್ಯ, ಮಹಾಬಲೇಶ್ವರ ಭಟ್, ಕೆ.ಜಿ.ಸುರೇಶ್, ಹರ್ಷವರ್ಧನ್‌ಭಟ್, ಗೊರಮನೆ ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net