

ಮಧ್ಯಪ್ರದೇಶ: ದಿನೇ ದಿನೇ ಮತಾಂತರ ಪ್ರಕರಣಗಳ ಕರಾಳ ಮುಖ ಒಂದೊಂದಾಗಿಯೇ ಹೊರ ಬರುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಸರ್ಕಾರಿ ಶಾಲಾ ಶಿಕ್ಷಕನೊಬ್ಬ ಬಡ ಹಿಂದೂ ಮಹಿಳೆಯೊಬ್ಬಳನ್ನು ಮತಾಂತರ ಮಾಡಿದ್ದಾನೆ. ನಂತರ ಆಕೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಆಕೆ ತನ್ನ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಮಧ್ಯಪ್ರದೇಶದ ಶಮೀಮ್ ಖಾನ್ ಎಂಬ ಶಿಕ್ಷಕನ ಕರಾಳ ಮುಖ ಇದೀಗ ಬೆಳಕಿಗೆ ಬಂದಿದೆ. ಸಮಾಜದಲ್ಲಿ ಶಿಕ್ಷಕರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಆದರೆ ಈ ಶಿಕ್ಷಕ ಮಾತ್ರ ತನ್ನ ವೃತ್ತಿಗೇ ಕಳಂಕ ತರುವಂತಹ ಕೆಲಸ ಮಾಡಿದ್ದಾನೆ. ಬಡತನದಲ್ಲಿ ಜೀವನ ಸಾಗಿಸಲು ಕಷ್ಟ ಪಡುತ್ತಿದ್ದ ಹಿಂದೂ ಹುಡುಗಿಯ ಜತೆಗೆ ಸ್ನೇಹ ಸಂಪಾದಿಸಿಕೊಂಡಿದ್ದಾನೆ. ನಂತರ ಆಕೆಯ ಮನಪರಿವರ್ತಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ.
ಬಡ ಹಿಂದು ಹುಡುಗಿಯನ್ನು ಮತಾಂತರ ಮಾಡಿ ಸುಮ್ಮನಾಗದ ಈ ಶಿಕ್ಷಕ, ತನ್ನ ಕ್ರೂರ ದೃಷ್ಟಿಯನ್ನು ಆಕೆಯ ಮಗಳತ್ತ ಹಾಯಿಸಿದ್ದಾನೆ. ಮಗಳ ಸಮಾನವಾದ ಹುಡುಗಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದರಿಂದ ಮನನೊಂದ ಬಾಲಕಿ ತನ್ನ ವಿದ್ಯಾಭ್ಯಾಸವನ್ನು ಪ್ರಥಮ ಪಿಯುಸಿಯಲ್ಲೇ ಕೊನೆಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಶಮೀಮ್ ಖಾನ್ ನಿರಂತರವಾಗಿ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದರಿಂದ ಮನನೊಂದ ಆಕೆ, ಸಹಾಯಕೋರಿ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಅಪಹರಣ, ಲೈಂಗಿಕ ದೌರ್ಜನ್ಯ ಹಾಗೂ ಬಲವಂತದ ಮತಾಂತರಕ್ಕೆ ಸಂಬಂಧಿಸಿದ ವಿವಿಧ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಎಫ್ಐಆರ್ ಪ್ರತಿಯನ್ನು ಪೊಲೀಸರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರೋಪಿ ಶಮೀಮ್ ಖಾನ್ ಬಡ ಹಿಂದೂ ಹುಡುಗಿಯ ಜತೆಗೆ ನಿರಂತರ ಸಂಪರ್ಕ ಹೊಂದಿದ್ದ. ಇವರಿಬ್ಬರು ಒಟ್ಟಿಗೆ ಇರುವ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿಯ ಪ್ರಕಾರ ಮಧ್ಯ ಪ್ರದೇಶ, ಉತ್ತರ ಪ್ರದೇಶ, ಹರ್ಯಾಣ, ದೆಹಲಿ, ಬಿಹಾರ ಮುಂತಾದ ರಾಜ್ಯಗಳಲ್ಲಿ ಮತಾಂತರ ಪ್ರಕರಣಗಳು ಹೆಚ್ಚುತ್ತಿವೆ. ಆರ್ಥಿಕವಾಗಿ ಸಮಸ್ಯೆ ಹೊಂದಿರುವ ಬಡ ಹಿಂದೂ ಹುಡುಗಿಯರಿಗೆ ಹಣದ ಆಮೀಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿವೆ. ಮತಾಂತರ ಮಾಡಿದ ಅತ್ಯಾಚಾರ ಮಾಡಿ, ಲೈಂಗಿಕ ದೌರ್ಜನ್ಯ ಮಾಡುತ್ತಿದ್ದಾರೆ. ಈ ಜಾಲಕ್ಕೆ ಸಿಲುಕಿಕೊಂಡ ಅಪಾರ ಸಂಖ್ಯೆಯ ಹಿಂದು ಹುಡುಗಿಯರು, ಇದರಿಂದ ಮತಾಂತರ ಸಮಸ್ಯೆಯಿಂದ ಹೊರಬರಲಾಗದೆ ಪರಿತಪಿಸುವಂತಾಗಿದೆ. (ಏಜೆನ್ಸೀಸ್)