ಬಿಸಿಲಿನ ಬೇಗೆ ತಪ್ಪಿಸಿಕೊಳ್ಳಲು ಮೈದಾನಕ್ಕೆ ಶಾಮಿಯಾನ ವ್ಯವಸ್ಥೆ

31blrp1.
ಈದ್ ಉಲ್ ಫಿತರ್ ಅಂಗವಾಗಿ ಬೇಲೂರು ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿರುವ ಮುಸಲ್ಮಾನರು.
Published on

ಬೇಲೂರು: ಈದ್ ಉಲ್ ಫಿತರ್ ಅಂಗವಾಗಿ ಸಾವಿರಾರು ಮುಸಲ್ಮಾನರು ಪಟ್ಟಣ ಸಮೀಪದ ಸೂರಾಪುರದಲ್ಲಿರುವ ಈದ್ಗಾ ಮೈದಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಸಾಮೂಹಿಕವಾಗಿ ಪ್ರಾಥನೆ ಸಲ್ಲಿಸಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಸ್ಥಳೀಯ ಮಸೀದಿಗಳಲ್ಲಿ ಸೋಮವಾರ ಬೆಳಗಿನ ಪ್ರಾರ್ಥನೆ ಸಲ್ಲಿಸಿದ ಮುಸಲ್ಮಾನರು ಪಟ್ಟಣದಲ್ಲಿರುವ ವಿವಿಧ ಮಸೀದಿಗಳ ಸಮೀಪದಿಂದ ಗುಂಪು ಗುಂಪಾಗಿ ಪಟ್ಟಣದ ಮುಖ್ಯರಸ್ತೆ ಹಾಗೂ ಅಂಬೇಡ್ಕರ್ ನಗರದ ಮೂಲಕ ಮೆರವಣಿಗೆಯಲ್ಲಿ ಸಮೀಪದ ಸೂರಾಪುರದ ಸಮೀಪವಿರುವ ಪುರಸಭೆಯ ನೀರು ಶುದ್ಧೀಕರಣ ಘಟಕದ ಎದುರಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ನಂತರ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಜತೆಗೆ ಈ ಬಾರಿಯ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈದ್ಗಾ ಮೈದಾನದಲ್ಲಿ ಶಾಮಿಯಾನ ಹಾಕಿಸಿದ್ದರಿಂದ ಎಲ್ಲರೂ ನೆರಳಿನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ರಂಜಾನ್ ಹಬ್ಬದ ಅಂಗವಾಗಿ ಈದ್ಗಾ ಮೈದಾನಕ್ಕೆ ತೆರಳುವ ರಸ್ತೆ ಹಾಗೂ ವಿವಿಧ ಮಸೀದಿಗಳ ಆವರಣದಲ್ಲಿ ಇನ್‌ಸ್ಪೆಕ್ಟರ್ ರೇವಣ್ಣ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net