ಬಸವಣ್ಣನವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡ್ರಿದೆ ಹುಷಾರ್​...ಶಾಸಕ ಯತ್ನಾಳ್​​ಗೆ Shamanuru Shivashankarappa ವಾರ್ನಿಂಗ್​

Shamanur ShivaShankarappa
Published on

ದಾವಣಗೆರೆ: ವಕ್ಛ್​ ವಿವಾದ ಸಂಬಂಧ ಬಿಜೆಪಿ ರೆಬೆಲ್​ ನಾಯಕರು ನಡೆಸುತ್ತಿರುವ ಹೋರಾಟದ ವೇಳೆ ವಿಜಯಪುರ ಕ್ಷೇತ್ರದ ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್​ ವಿಶ್ವಗುರು ಬಸವಣ್ಣನವರ ಕುರಿತು ನೀಡಿದ್ದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಗದ್ದಲವನ್ನೇ ಎಬ್ಬಿಸಿತ್ತು. ಶಾಸಕ ಯತ್ನಾಳ್​ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ, ಕಾಂಗ್ರೆಸ್​ ಶಾಸಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ವಿಶ್ವಗುರು ಬಸವಣ್ಣನವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.

ಯತ್ನಾಳ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಶಂಕರಪ್ಪ (Shamanuru Shivashankarappa) , ವಿಶ್ವಗುರು ಬಸವಣ್ಣನವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಹುಷಾರ್. ನಿಮ್ಮ ಬಾಯಿಗೆ ನೀವೇ ಬೀಗ ಹಾಕಿಕೊಂಡರೆ ಒಳ್ಳೆಯದು. ಇಲ್ಲದೆ ಹೋದರೆ ನಾವೇ ಬೀಗ ಹಾಕುತ್ತೇವೆ ಎಂದು ಹರಿಹಾಯ್ದಿದ್ದಾರೆ.

ಬಸವಣ್ಞ ಹೊಳೆಗೆ ಹಾರಿ ಸತ್ತರು ಎಂದು ಹೇಳುತ್ತೀರಿ. ಇನ್ನೊಂದೆಡೆ ವೀರಶೈವ ಮಹಾಸಭಾ ಎಂದರೆ ಭೀಮಣ್ಣ ಖಂಡ್ರೆ, ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಎನ್ನುತ್ತೀರಿ. ಮಹಾಸಭಾ ಎಂದರೆ ಏನೆಂದುಕೊಂಡಿದ್ದೀರಿ. ನಿಮ್ಮ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಬಸವಣ್ಣನವರು ಹೊಳೆಗೆ ಹಾರಿದರು ಎನ್ನುವ ನಿಮ್ಮನ್ನೇ ಹೊಳೆಗೆ ಹಾರಿಸಬೇಕಾಗುತ್ತದೆ. ನಾಲಿಗೆ ಮೇಲೆ ಹಿಡಿತವಿರಲಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ, ಕಾಂಗ್ರೆಸ್​ ಶಾಸಕ ಶಾಮನೂರು ಶಿವಶಂಕರಪ್ಪ ಯತ್ನಾಳ್​ಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net