

ಬೆಂಗಳೂರು: ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ. ಪರಿಷ್ಕರಣೆಯನ್ನೂ ಮಾಡಲ್ಲ. 2028ರಲ್ಲಿ ಬಿಜೆಪಿಗೆ ಮಹಿಳೆಯರು ಓಟೂ ಹಾಕಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಶಕ್ತಿ ಯೋಜನೆ ಫಲಾನುಭವಿಗಳು ಈಗ ಆಧಾರ್ ಕಾರ್ಡ್ ಬಳಸಿ ಪ್ರಯಾಣಿಸುತ್ತಿದ್ದಾರೆ. ಮುಂದಿನ ಆರ್ಥಿಕ ವರ್ಷದಲ್ಲಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಅದನ್ನು ಬಳಸಿ ಪ್ರಯಾಣಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಶಕ್ತಿ ಯೋಜನೆಗೆ ಸರ್ಕಾರ 8800 ಕೋಟಿ ರೂಪಾಯಿಯನ್ನು ನಿಗಮಗಳಿಗೆ ನೀಡುತ್ತದೆ. ಇದೀಗ ಪ್ರಯಾಣ ದರ ಏರಿಕೆಯಿಂದ ನಿಗಮಗಳ ಆದಾಯದಲ್ಲಿ 1200 ಕೋಟಿ ರೂ. ಏರಿಕೆಯಾಗಲಿದೆ. ಹೀಗಾಗಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ, ಪುರುಷರಿಂದ ವಸೂಲಿ ಮಾಡಲಾಗುತ್ತದೆ ಎಂಬ ವಾದವೇ ಸರಿಯಲ್ಲ ಎಂದು ಸಾರಿಗೆ ಸಚಿವರು ಪ್ರತಿಪಾದಿಸಿದರು.
ಜತೆಗೆ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆ ವಿಚಾರವಾಗಿ ಸಾರಿಗೆ ನಿಗಮಗಳ ಯೂನಿಯನ್ ಜತೆ ಜನವರಿ 15ರ ನಂತರ ಮಾತುಕತೆ ಮಾಡಲಾಗುತ್ತದೆ. ಖಾಸಗಿ ಬಸ್‌ನವರು ಪ್ರಯಾಣ ದರ ಏರಿಕೆ ಪ್ರಸ್ತಾವನೆ ಕೊಟ್ಟರೆ ನಂತರ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆಂದರು.