

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು, IPL ನ ಕೆಕೆಆರ್ ತಂಡವನ್ನು ಖರೀದಿಸಲು ಹೇಗೆ ಮನವೊಲಿಸಿದರು ಎಂಬುದರ ಬಗ್ಗೆ ಮಾತನಾಡಿರುವ ಐಪಿಎಲ್ನ ಸಂಸ್ಥಾಪಕ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಶಾರುಖ್ ಖಾನ್ ಐಪಿಎಲ್ನ ''ಪಿಲ್ಲರ್'' ಎಂದು ಕರೆದಿದ್ದಾರೆ.
ಈ ಕುರಿತು ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಲಲಿತ್, '' ಕ್ರೀಡಾಂಗಣಕ್ಕೆ ಆಟ ನೋಡಲು ಅಭಿಮಾನಿಗಳನ್ನು, ಜನರನ್ನು ಮತ್ತು ವಿಶೇಷವಾಗಿ ಮಕ್ಕಳು, ಮಹಿಳೆಯರನ್ನು ಹೇಗೆ ಕರೆ ತರುವುದು ಎಂಬ ಯೋಚನೆಯಲ್ಲಿದ್ದೆ. ಯಾವುದಾದರೂ ಒಂದು ಐಪಿಎಲ್ ತಂಡವನ್ನು ಸೆಲೆಬ್ರಿಟಿಸ್ ಖರೀದಿಸಿದರೆ ಉತ್ತಮ ಎಂದು ಅನಿಸಿತ್ತು. ಹೀಗಾಗಿ, ಶಾರುಖ್ ಅವರನ್ನು ಸಂಪರ್ಕ ಮಾಡಲಾಯಿತು. ಐಪಿಎಲ್ ಬಗ್ಗೆ ಅದರಲ್ಲೂ ಶಾರುಖ್ ಗೆ ಏನೂ ತಿಳಿಯದು. ಆಗಿದ್ದರೂ ಅವರ ಕೂಡ ಬಿಡ್ ಮಾಡಿಸಿದೆವು'' ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ನನಗೆ ಶಾರುಖ್ ಖಾನ್ ಬಗ್ಗೆ ತಿಳಿದಿತ್ತು. ಆದರೆ, ಬಾಲಿವುಡ್ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಅದು ಅಭಿಮಾನಿಗಳು ಮತ್ತು ಶಾರುಕ್ಗೆ ಮಾತ್ರ ಗೊತ್ತು. ಇದೆಲ್ಲರದ ನಡುವೆ ಶಾರುಖ್ ಐಪಿಎಲ್ ಬಿಡ್ಡಿಂಗ್ ಮಾಡಿದರು. ಮುಂಬೈ ಮತ್ತು ಅಹಮದಾಬಾದ್ ಮೇಲೆ ಶಾರುಖ್ಗೆ ಆಕರ್ಷಣೆಯಾಗಿತ್ತು. ಆದರೆ, ಅ ಪರಿಸ್ಥಿತಿಯಲ್ಲಿ ಕೋಲ್ಕತ್ತಾ ತಂಡವನ್ನು ಖರೀದಿಸಿದರು. ಇನ್ನೂ ತಂಡವನ್ನು ಖರೀದಿ ಮಾಡಿದ ಬಳಿಕ ಎಲ್ಲೆಂದರಲ್ಲಿ ಪ್ರಚಾರಕ್ಕೆ ಹಾಜರಿರಬೇಕು ಎಂದು ಶಾರುಖ್ಗೆ ಹೇಳಿದ್ದೆ. ಇದಕ್ಕೆ ಅವರು, ನನಗೆ ಸಿನಿಮಾ ಡೇಟ್ಸ್ಗಳು ಇವೆ ಎಂದಿದ್ದರು. ನಾವು ಹೇಗೋ ಮಾಡಿ ಅವರ ಮನವೊಲಿಸಿದೆ. ಇಂದು ಅವರು (ಶಾರುಖ್) ಐಪಿಎಲ್ನ ಆಧಾರಸ್ತಂಭ ಎಂದು ನನಗನಿಸುತ್ತಿದೆ ಎಂದು ಹೇಳಿದ್ದಾರೆ.
ಐಪಿಎಲ್ ಬಿಡ್ ಮಾಡುವ ಸಂದರ್ಭದಲ್ಲಿ ಶಾರುಖ್ ತುಂಬಾ ಪ್ರಮುಖ ಪಾತ್ರವಹಿಸಿದ್ದರು. ಶಾರುಖ್ ಬಿಡ್ ಮಾಡಿದ್ದರಿಂದ ಮಕ್ಕಳು ಮತ್ತು ಮಹಿಳೆಯರನ್ನು ಕ್ರೀಡಾಂಗಣಕ್ಕೆ ಕರೆ ತರಲು ಸಾಧ್ಯವಾಯಿತು ಎಂದು ಲಲಿತ್ ಕೊಂಡಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ,(ಏಜೆನ್ಸೀಸ್).