ಶಾರುಖ್ ಖಾನ್ ಚಿತ್ರದಲ್ಲಿ ಸಮಂತಾ..ಇದೆಲ್ಲ ಸುಳ್ಳು ಎಂದಿದ್ದೇಕೆ ಹಿರಾನಿ ಆಪ್ತರು?

samantha
Published on

ಮುಂಬೈ: ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ದೇಶಭಕ್ತಿಯ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಸಮಂತಾ ನಟಿಸಲಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಹಿರಾನಿ ಅವರ ಹತ್ತಿರದ ಮೂಲಗಳು ತಿಳಿಸಿವೆ.

ಹೀರಾಜಿ ತಮ್ಮ ಮುಂದಿನ ಚಿತ್ರಕ್ಕಾಗಿ ಸ್ಕ್ರಿಪ್ಟ್​ ತಯಾರಿಸುವುದರಲ್ಲಿ ನಿರತರಾಗಿದ್ದಾರೆ. ಆದರೆ, 'ಡುಂಕಿ' ಚಿತ್ರದ ನಂತರ ಶಾರುಖ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಹೊಸ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ. ಇದರಲ್ಲಿ ಸಮಂತಾ ಸಹ ಇರುತ್ತಾರೆ ಎಂಬ ವದಂತಿಗಳು ಹಬ್ಬಿದ್ದು, ಇದನ್ನು ಹಿರಾನಿ ಹತ್ತಿರದ ಮೂಲಗಳು ನಿರಾಕರಿಸಿವೆ.

ಯಾವುದೇ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಶಾರುಕ್​ ಅಥವಾ ಸಮಂತಾ ಅವರೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಈ ಸುದ್ದಿ ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು ಎಂದು ಮೂಲಗಳು ನಿರಾಕರಿಸಿವೆ.

ರಾಜ್‌ಕುಮಾರ್ ಹಿರಾನಿ, 'ಡುಂಕಿ' ಬಿಡುಗಡೆಗೆ ಮುನ್ನ , ಶಾರುಖ್ ಖಾನ್ ಜೊತೆ ಕೆಲಸ ಮಾಡುವ ಬಗ್ಗೆ ಮಾತನಾಡಿದ್ದಾರೆ. ಶಾರುಕ್​ ಜೊತೆ ಕೆಲಸ ಮಾಡುವುದು ವಿವರಿಸಲು ಕಷ್ಟವಾಗುವಷ್ಟು ಸಂತೋಷವಾಗಿದೆ. ಅವರು ಸೆಟ್‌ನಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತಾರೆ ಮತ್ತು ಯಾವಾಗಲೂ ತಮ್ಮ ಸುತ್ತಲಿನ ಎಲ್ಲರನ್ನು ಸಂತೋಷಪಡಿಸುತ್ತಾರೆ. ಅವರು ಸಾಕಷ್ಟು ತಯಾರಿ ಮಾಡುತ್ತಾರೆ. ನಾನು ಅವರನ್ನು ಪೂರ್ವಸಿದ್ಧತೆಯಿಲ್ಲದ ನಟ ಎಂದು ಭಾವಿಸಿದ್ದೆ ಎಂದು ಹೇಳಿದ್ದರು.

ಏತನ್ಮಧ್ಯೆ, ಶಾರುಕ್ ಅವರ ಮುಂದಿನ ಚಿತ್ರ 'ಕಿಂಗ್' ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ, ಇದರಲ್ಲಿ ಅವರ ಮಗಳು ಸುಹಾನಾ ಖಾನ್ ಕೂಡ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net