ಪ್ರಭಾಸ್ ಅಭಿಮಾನಿಗಳಿಗೆ ಬಿಗ್ ಬಿ ಕ್ಷಮೆ! ‘ಕಲ್ಕಿ 2898 ಎಡಿ’ ನೋಡಿದ ನಂತರ ನನ್ನ ಹತ್ಯೆ ಮಾಡಬೇಡಿ ಎಂದಿದ್ದೇಕೆ?

kalki
Published on

ಮುಂಬೈ: 'ಕಲ್ಕಿ 2898 ಎಡಿ' ಜೂನ್ 27 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಬಹುನಿರೀಕ್ಷಿತ ಈ ಚಿತ್ರದ ಫೈಟ್ ಸೀಕ್ವೆನ್ಸ್‌ಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಮಿತಾಬ್ ಬಚ್ಚನ್, ಮೊದಲಿಗೆ ಪ್ರಭಾಸ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದರು. ಅವರು ತಮ್ಮ ಪಾತ್ರ ಅಶ್ವತ್ಥಾಮನ ಬಗ್ಗೆಯೂ ಮಾತನಾಡಿದರು.

ಚಿತ್ರದಲ್ಲಿ ಪ್ರಭಾಸ್ ಜೊತೆ ಯುದ್ಧ ಮಾಡಿದ್ದಕ್ಕಾಗಿ ಪ್ರಭಾಸ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುವೆ ಎಂದು ಚಿತ್ರದಲ್ಲಿನ ಸಾಹಸ ದೃಶ್ಯಗಳ ಬಗ್ಗೆ ಮಾತನಾಡುವಾಗ ಹೇಳಿದರು.

ತಮ್ಮ ಪಾತ್ರವು ಪ್ರಭಾಸ್ ಅವರ ಭೈರವ ಪಾತ್ರದ ಜೊತೆ ತೀವ್ರವಾದ ಹೋರಾಟದ ದೃಶ್ಯಗಳನ್ನು ಹೊಂದಿದೆ ಎಂದು ವಿವರಿಸಿದರು .

ಪ್ರಾಜೆಕ್ಟ್ ಬಗ್ಗೆ ಮಾತನಾಡಲು ನಾಗಿ [ನಾಗ್ ಅಶ್ವಿನ್] ನನ್ನ ಬಳಿಗೆ ಬಂದಾಗ, ಅವರು ನನ್ನ ಪಾತ್ರ ಹೇಗಿರುತ್ತದೆ ಮತ್ತು ಪ್ರಭಾಸ್ ಪಾತ್ರ ಹೇಗಿರುತ್ತದೆ ಎಂಬ ಚಿತ್ರಣ ನೀಡಿದ್ದರು. ನಾನು ದೊಡ್ಡವನಾಗಿ 'ಪ್ರಭಾಸ್' ಅನ್ನು ತಳ್ಳುವುದಿದೆ. ಇದು ಅವರ ಅಭಿಮಾನಿಗಳಿಗೆ ಬೇಜಾರಾಗಬಹುದು. ದಯವಿಟ್ಟು ನನ್ನನ್ನು ಕ್ಷಮಿಸಿ, ಕೈ ಮುಗಿದು ಬೇಡುತ್ತೇನೆ. ನಾನು ಏನು ಮಾಡುತ್ತೇನೆ ಎಂಬುದನ್ನು ನೀವು ನೋಡಿದ ನಂತರ ನನ್ನನ್ನು ಹತ್ಯೆ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

ನಾಗ್ ಅಶ್ವಿನ್ ಬರೆದು ನಿರ್ದೇಶಿಸಿದ, 'ಕಲ್ಕಿ 2898 ಎಡಿ' ಹಿಂದೂ ಪುರಾಣಗಳಿಂದ ಪ್ರೇರಿತವಾದ ವೈಜ್ಞಾನಿಕ ಕಾಲ್ಪನಿಕ ಸಾಹಸ ಚಿತ್ರವಾಗಿದೆ . ಅತ್ಯಂತ ದುಬಾರಿ ವೆಚ್ಚದ ಚಿತ್ರ ಎಂದು ಹೇಳಲಾಗಿದ್ದು, ಇದರ ಬಜೆಟ್ ಈಗ 600 ಕೋಟಿ ರೂಪಾಯಿಯಾಗಿದೆ ಎಂದು ವರದಿಯಾಗಿದೆ. ವೈಜಯಂತಿ ಮೂವೀಸ್ ನಿರ್ಮಾಣದ ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತವಿದೆ.

ದಿಶಾ ಪಟಾನಿ, ರಾಜೇಂದ್ರ ಪ್ರಸಾದ್, ಶೋಭನಾ, ಶಾಶ್ವತ ಚಟರ್ಜಿ, ಬ್ರಹ್ಮಾನಂದಂ, ಪಶುಪತಿ, ಅನ್ನಾ ಬೆನ್ ಮತ್ತು ಮಾಳವಿಕಾ ನಾಯರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಛಾಯಾಗ್ರಾಹಣ ಜೊರ್ಡ್ಜೆ ಸ್ಟೋಜಿಲ್ಕೋವಿಕ್, ಸಂಕಲನವನ್ನು ಕೋಟಗಿರಿ ವೆಂಕಟೇಶ್ವರ ರಾವ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net