"ಸರಿಯಾಗಿ ನೆನಪಿದೆ.." 35 ವರ್ಷಗಳ ಹಿಂದೆ 'ವ್ಯಾಲೆಂಟೈನ್ ಡೇ'ಯಂದು ಗೌರಿಗೆ ಶಾರುಖ್ ಕೊಟ್ಟ ಸರ್ಪ್ರೈಸ್ ಗಿಫ್ಟ್ ಇದೇ ನೋಡಿ!

srk new
Published on

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಕೆಲವರು ಅವರನ್ನು ಬಾಲಿವುಡ್‌ನ ಕಿಂಗ್, ಕಿಂಗ್ ಖಾನ್ ಎಂದು ಕರೆದರೆ, ಮತ್ತೆ ಕೆಲವರು ರೊಮ್ಯಾನ್ಸ್ ಕಿಂಗ್ ಸೂಪರ್ ಸ್ಟಾರ್ ಎಂದು ಪ್ರೀತಿಯಿಂದ ಕರೆಯುತ್ತಾರೆ. ವಿಶೇಷವಾಗಿ ಶಾರುಖ್ ಅಭಿಮಾನಿಗಳು ತೆರೆಯ ಮೇಲೆ ಅವರ ರೊಮ್ಯಾನ್ಸ್ ನೋಡಿದರೆ ಹಾಗೆ ಮೈ ಮರೆಯುವುದರಲ್ಲಿ ಎರಡು ಮಾತಿಲ್ಲ. ಅಂದಹಾಗೆ ಚಲನಚಿತ್ರಗಳಲ್ಲಿಯಂತೆ ಶಾರುಖ್ ನಿಜ ಜೀವನದಲ್ಲೂ ತುಂಬಾ ರೊಮ್ಯಾಂಟಿಕ್. ಹೌದು, ಶಾರೂಖ್ ಗೌರಿ ಖಾನ್ ರನ್ನು ಪ್ರೀತಿಸಿ ಮದುವೆಯಾದರು. ಇಬ್ಬರೂ ಮದುವೆಯಾಗಿ ಸುಮಾರು ಮೂರೂವರೆ ದಶಕಗಳು ಕಳೆದಿದ್ದು, ಶಾರುಖ್ ಖಾನ್ ಗೌರಿಗೆ ಕೊಟ್ಟ ಮೊದಲ ಗಿಫ್ಟ್ ಏನು ಗೊತ್ತಾ?

ಶಾರುಖ್ 2023 ರಲ್ಲಿ ಆಸ್ಕ್ ಎಸ್‌ಆರ್‌ಕೆ ಸೆಷನ್​​​​ನಲ್ಲಿ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು "ಪ್ರೇಮಿಗಳ ದಿನದಂದು ಗೌರಿ ಖಾನ್‌ಗೆ ಏನು ಉಡುಗೊರೆ ನೀಡಿದ್ದೀರಿ" ಎಂದು ಕೇಳಿದ್ದರು. ಆ ವೇಳೆ ಶಾರುಖ್ ಕೂಡ ಆ ವ್ಯಕ್ತಿಗೆ ಉತ್ತರ ನೀಡಿದ್ದರು. ಅವರು "ನನಗೆ ಸರಿಯಾಗಿ ನೆನಪಿದೆ, ಇದಾಗಿ ಸುಮಾರು 34 ವರ್ಷಗಳು ಕಳೆದಿವೆ. ಆಕೆಗೆ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಕಿವಿಯೋಲೆ ಕೊಟ್ಟಿದ್ದೆ" ಎಂದರು. ಶಾರುಖ್ ಅವರ ಈ ಪೋಸ್ಟ್ ಆ ಸಮಯದಲ್ಲಿ ಸಖತ್ ವೈರಲ್ ಆಗಿತ್ತು. ಜತೆಗೆ ಜನರು ಇದಕ್ಕೆ ಸಾಕಷ್ಟು ಕಾಮೆಂಟ್ ಮಾಡಿದ್ದರು.

ಒಮ್ಮೆ ಹಳೆಯ ಸಂದರ್ಶನವೊಂದರಲ್ಲಿ ಶಾರುಖ್ ಅವರಿಗೆ ಮೊದಲ ಕ್ರಶ್ ಯಾರು ಎಂದು ಕೇಳಿದಾಗ, ಈ ಸಮಯದಲ್ಲಿ ಶಾರುಖ್ ಗೌರಿ ಖಾನ್ ಹೆಸರನ್ನು ತೆಗೆದುಕೊಂಡಿದ್ದರು. ದೆಹಲಿಗೆ ಪಾರ್ಟಿಗೆಂದು ಹೋದಾಗ ಶಾರುಖ್​​​​ಗೆ 18 ವರ್ಷ ಮತ್ತು ಗೌರಿಗೆ 14 ವರ್ಷ. ಈ ಪಾರ್ಟಿಯಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು. ಶಾರುಖ್ ಪ್ರಕಾರ, ಶಾರುಖ್ 3 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಮಾತನಾಡಿದ ಮೊದಲ ಹುಡುಗಿ ಗೌರಿ ಖಾನ್. ಗೌರಿ ಅವರೇ ಶಾರುಖ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಗೌರಿಯ ಈ ಸ್ಟೈಲ್ ಶಾರುಖ್ ಗೆ ಇಷ್ಟವಾಯಿತು. ಇದಾದ ನಂತರ ಈ ಹುಡುಗಿಯನ್ನು ಮದುವೆಯಾಗುವುದಾಗಿ ಶಾರುಖ್ ನಿರ್ಧರಿಸಿದ್ದರಂತೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net