ಶಾರುಖ್​ಗೆ ನಯನತಾರಾ ಜತೆ ನಟಿಸುವಾಗ ಅವ್ರ ಮೇಲೆ ಮನಸ್ಸಾಗಿತ್ತಾ? ನಟ ಹೇಳಿದ್ದೇನು?

snc
Published on

ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 7ರಂದು ಜವಾನ್​ ಬಿಡುಗಡೆಯಾಗಲಿದ್ದು, ಶಾರುಖ್​ ಫ್ಯಾನ್ಸ್​ ತುದಿಗಾಲಿನಲ್ಲಿ ಚಿತ್ರ ನೋಡಲು ನಿಂತಿದ್ದಾರೆ. ‘ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದೆ.
ಶಾರುಖ್ ಖಾನ್ ಚಿತ್ರದಲ್ಲಿ ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಕ್ಷಿಣದ ಬಹುತೇಕ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ತಮಿಳಿನ ವಿಜಯ್ ಸೇತುಪತಿ ಮುಖ್ಯ ವಿಲನ್ ರೀತಿನೇ ಕಾಣಿಸುತ್ತಿದ್ದಾರೆ. ನಟಿ ದೀಪಿಕಾ ಪಡುಕೋಣೆ ಇಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದಾರೆ. ನಯನತಾರಾ ಇಲ್ಲಿ ಹೊಸ ಖದರ್ ಅಲ್ಲಿಯೇ ಬರ್ತಿದ್ದಾರೆ. ಕನ್ನಡದ ಪ್ರಿಯಾಮಣಿ ಕೂಡ ಅಭಿನಯಿಸಿದ್ದಾರೆ.


ಇದರ ನಡುವೆಯೇ ನಟ ಶಾರುಖ್​ ಖಾನ್​ ತಿಂಗಳಿನಿಂದ ಟ್ವಿಟರ್​ನಲ್ಲಿ ನಡೆಸುತ್ತಿರುವ #AskSRK ಸೆಷನ್​ ಮುಂದುವರೆದಿದ್ದು, ಫ್ಯಾನ್ಸ್​ ಸಾಕಷ್ಟು ಪ್ರಶ್ನೆಗಳನ್ನ ಶಾರುಖ್​ ಖಾನ್​ ಮುಂದಿಟ್ಟಾದ್ದಾರೆ. ಇದೀಗ ಜವಾನ್​ ಚಿತ್ರದ ಕುರಿತು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಅವರು ಕೇಳಿದ್ದೇನೆಂದರೆ, ಚಿತ್ರದಲ್ಲಿ ನಯನತಾರಾ ನಟಿಸಿದ್ದಾರೆ. ಹೀಗೆ ಅವರ ಜೊತೆ ನಟಿಸುವಾಗ ಅವರ ಬಗೆಗಿನ ಅಭಿಪ್ರಾಯವನ್ನು ಕೇಳಿದ್ದಾರೆ.


ಅಭಿಮಾನಿ ಕೇಳಿದ್ದೇನೆಂದರೆ, 'ನಯನತಾರಾ ಜೊತೆ ನಟಿಸುವಾಗ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೀರಾ' ಎಂದು. ಅವರು ಹೀಗೆ ಕೇಳಿರುವುದಕ್ಕೆ ಕಾರಣವೂ ಇದೆ. ಅದೇನೆಂದರೆ ಈ ಹಿಂದೆ ಶಾರುಖ್​ ಅವರು ನಯನತಾರಾ ಕುರಿತು ಹೇಳಿದ್ದರು. ಜವಾನ್​ ಚಿತ್ರದಲ್ಲಿ ನಯನತಾರಾ ನನ್ನ ರೋಮ್ಯಾಂಟಿಕ್ ಪಾಲುದಾರರಾಗಿ ನಟಿಸಿದ್ದಾರೆ ಎಂದಿದ್ದರು.


ತಮಾಷೆಯಾಗಿ ಉತ್ತರಿಸಿದ ಶಾರುಖ್​, 'ಚುಪ್ ಕರೋ! ದೋ ಬಚ್ಚೋನ್ ಕಿ ಮಾ ಹೈ ವೋ! ಎಂದಿದ್ದಾರೆ. ಅಂದರೆ ಸುಮ್ಮನಿರಿ, ಅವಳೀಗ ಎರಡು ಮಕ್ಕಳ ತಾಯಿ ಎಂದಿದ್ದಾರೆ. ಇದಕ್ಕೆ ಸಿಕ್ಕಾಪಟ್ಟೆ ಕಮೆಂಟ್ಸ್​ಗಳು ಬಂದಿದ್ದು, ಶಾರುಖ್​ ಅವರ ಹಾಸ್ಯವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಇದೇ ಸೆಷನ್​ನಲ್ಲಿ ಇನ್ನೋರ್ವ ಫ್ಯಾನ್​ ಹುಡುಗಿಯರನ್ನು ಪಟಾಯಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net