92 ಕೋಟಿ ರೂ. ಟ್ಯಾಕ್ಸ್ ಕಟ್ಟಿದ ಶಾರುಖ್ !: ಅತಿಹೆಚ್ಚು ಆದಾಯ ತೆರಿಗೆ ಸಲ್ಲಿಸಿದ ನಟ

sharukh 1
Published on


ಬಾಲಿವುಡ್ ನಟ ಶಾರುಖ್ ಖಾನ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಜವಾನ್’, ‘ಪಠಾಣ್’ ಹಾಗೂ ‘ಡಂಕಿ’ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಧೂಳ್ ಎಬ್ಬಿಸಿದ್ದವು. ಮೂರು ಸಿನಿಮಾಗಳು ಎರಡೂವರೆ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದ್ದವು. ಈ ಮಧ್ಯೆಯೇ, ಶಾರುಖ್‌ಗೆ ಹಲವು ಗೌರವಗಳು ದೊರೆತಿದ್ದವು. ಪ್ಯಾರಿಸ್‌ನ ಗ್ರೇವಿನ್ ಮ್ಯೂಸಿಯಂನಲ್ಲಿ ಶಾರುಖ್ ಬಂಗಾರದ ನಾಣ್ಯವನ್ನು ಠಂಕಿಸಲಾಗಿತ್ತು ಹಾಗೂ ಲುಕಾರ್ನೋ ಫಿಂ ೆಸ್ಟಿವಲ್‌ನಲ್ಲಿ ಜೀವಮಾನ ಸಾಧನೆಗಾಗಿ ಗೌರವಿಸಲಾಗಿತ್ತು. ಈ ಎರಡು ಗೌರವ ಪಡೆದ ಮೊದಲ ಭಾರತೀಯ ನಟ ಎಂಬ ಖ್ಯಾತಿ ಅವರದ್ದಾಗಿತ್ತು. ಇದೀಗ 2024ರಲ್ಲಿ ಅತಿಹೆಚ್ಚು ಟ್ಯಾಕ್ಸ್ ಕಟ್ಟಿದ ಸೆಲೆಬ್ರಿಟಿ ಎಂಬ ಪಟ್ಟ ಶಾರುಖ್ ಖಾನ್ ದೊರೆತಿದೆ. ಈ ವರ್ಷ ಅವರು ಬರೋಬ್ಬರಿ 92 ಕೋಟಿ ರೂ. ಟ್ಯಾಕ್ಸ್ ಕಟ್ಟಿದ್ದಾರಂತೆ. ಈ ಮೂಲಕ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಶಾರುಖ್ ಮೊದಲ ಸ್ಥಾನದಲ್ಲಿದ್ದು, 80 ಕೋಟಿ ರೂ. ಆದಾಯ ತೆರಿಗೆ ಕಟ್ಟಿರುವ ತಮಿಳು ನಟ ದಳಪತಿ ವಿಜಯ್ ಎರಡನೇ ಸ್ಥಾನದಲ್ಲಿದ್ದಾರೆ. ಬಳಿಕ ಸಲ್ಮಾನ್ 75 ಕೋಟಿ, ಅಮಿತಾಭ್ ಬಚ್ಚನ್ 71 ಕೋಟಿ ರೂ., ವಿರಾಟ್ ಕೊಹ್ಲಿ 66 ಕೋಟಿ ರೂ. ಆದಾಯ ತೆರಿಗೆ ಕಟ್ಟುವ ಟಾಪ್ 5ರ ಪಟ್ಟಿಯಲ್ಲಿದ್ದಾರೆ. ಇನ್ನು 10ರ ಪಟ್ಟಿಯಲ್ಲಿ ಅಜಯ್ ದೇವಗನ್, ಎಂ.ಎಸ್.ಧೋನಿ, ರಣಬೀರ್ ಕಪೂರ್, ಹೃತಿಕ್ ರೋಷನ್, ಸಚಿನ್ ತೆಂಡುಲ್ಕರ್, ಕಪಿಲ್ ಶರ್ಮಾ ಇದ್ದಾರೆ. ಸದ್ಯ ಶಾರುಖ್ ಖಾನ್ ‘ಕಿಂಗ್’ ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net