ಆಸ್ಪತ್ರೆಗೆ ಹೋದ ಯುವತಿಗೆ ಇಂಜೆಕ್ಷನ್ ನೀಡೋ ನೆಪದಲ್ಲಿ ಖಾಸಗಿ ಅಂಗ ಸ್ಪರ್ಶಿಸಿದ ಕಾಮುಕ ಶುಶ್ರೂಷಕ

Ramakrishna
Published on

ಬೆಂಗಳೂರು: ನಗರದ ಪ್ರತಿಷ್ಠಿತ ನರ್ಸಿಂಗ್​ ಹೋಂ ಒಂದರಲ್ಲಿರುವ ಪುರುಷ ನರ್ಸ್​​ನ ಕಾಮಕಾಂಡ ಇದು. ಚಿಕಿತ್ಸೆಗೆ ಹೋದ ಯುವತಿ ಇದೀಗ ಈತನ ವಿರುದ್ಧ ದೂರು ದಾಖಲಿಸಿದ್ದಾರೆ.

ವಿಪರೀತ ಕಾಲು ನೋವು ಎಂದು ಮಧ್ಯರಾತ್ರಿಯಲ್ಲಿ ಯುವತಿಯೋರ್ವಳು ಕನಕಪುರ ರಸ್ತೆಯಲ್ಲಿ ಕ್ಯೂರ್​ ಆಸ್ಪತ್ರೆಗೆ ತೆರಳಿದ್ದರು. ಆಗ ಡ್ಯೂಟಿ ಡಾಕ್ಟರ್​ ಇರದ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಯುವತಿಗೆ ಇಂಜೆಕ್ಷನ್​ ನೀಡುವಂತೆ ಐಸಿಯು ವೈದ್ಯ ಈ ಕಾಮುಕ ಶುಶ್ರೂಷಕನಿಗೆ ಹೇಳಿದ್ದ. ಆದರೆ ರಾಮಕೃಷ್ಣ ಇಂಜೆಕ್ಷನ್​ ನೀಡುವಾಗ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ, ವಿಕೃತಿ ಮೆರೆದಿದ್ದಾನೆ.

ಯುವತಿ ಇದನ್ನು ವಿರೋಧಿಸಿ, ಆಸ್ಪತ್ರೆಯವರ ಬಳಿ ಪ್ರಶ್ನೆ ಮಾಡಿದರೆ ಅವರೇನೂ ಪ್ರತಿಕ್ರಿಯೆ ನೀಡಲಿಲ್ಲ. ಇದೀಗ ಆಕೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net