More

    ಕರೊನಾ ಪರೀಕ್ಷೆಗೆ ಹೆದರಿ ಕಾಳಜಿ ಕೇಂದ್ರ ತೊರೆಯುತ್ತಿರುವ ನಿರಾಶ್ರಿತರು..!

    ವಿಜಯಪುರ: ಕರೊನಾ ಪರೀಕ್ಷೆಗೆ ಹೆದರಿ ನಿರಾಶ್ರಿತರು ಕಾಳಜಿ ಕೇಂದ್ರ ತೊರೆಯುತ್ತಿರುವ ಘಟನೆ ವಿಜಯಪುರದ ಉಮರಾಣಿ ಕಾಳಜಿ ಕೇಂದ್ರದಲ್ಲಿ ನಡೆದಿದೆ.

    ಸುಮಾರು ಐವತ್ತು ಕುಟುಂಬಗಳು ಉಮರಾಣಿ ಸರ್ಕಾರಿ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿವೆ. ಬೆಳಗಿನ ಉಪಹಾರ ಸೇವನೆ ಬಳಿಕ ಆರೋಗ್ಯ ಅಧಿಕಾರಿಗಳು ಕರೊನಾ ಚಿಕಿತ್ಸೆಗೆ ಮುಂದಾದರು. ತಪಾಸಣೆ ಸುದ್ದಿ ತಿಳಿಯುತ್ತಿದ್ದಂತೆ ಮಕ್ಕಳೊಂದಿಗೆ ಮಹಿಳೆಯರು ಕಾಳಜಿ ಕೇಂದ್ರದಿಂದ ನಿರ್ಗಮಿಸಲು ಯತ್ನಿಸಿದ್ದಾರೆ.

    ಇದನ್ನೂ ಓದಿ: ‘ಶ್ವಾಸಕೋಶಕ್ಕೆ ಸೋಂಕು ಹೆಚ್ಚಾಗಿ ತಗುಲಿದೆ..ಸದ್ಯ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದೇನೆ…’

    ಆದರೆ, ತಪಾಸಣೆ ನಡೆಸಲ್ಲ ಎಂಬ ಭರವಸೆ ನೀಡಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರಾಶ್ರಿತರನ್ನು ಕಾಳಜಿ ಕೇಂದ್ರದಲ್ಲಿ ಉಳಿಸಿಕೊಂಡರು. ಸಚಿವೆ ಶಶಿಕಲಾ ಜೊಲ್ಲೆ ಅವರು ಬರುವವರೆಗೆ ನಿರಾಶ್ರಿತರನ್ನು ಹಿಡಿದಿಡಲು ಹರಸಾಹಸ ಪಡಬೇಕಾಯಿತು. ಕೊನೆಗೆ ಮಾಸ್ಕ್ ಹಾಕಿಕೊಂಡು ಕುಳಿತುಕೊಳ್ಳಲು ಮನವಿ ಮಾಡಲಾಯಿತು. ಒತ್ತಾಯಕ್ಕೆ‌ಮಣಿದು ನಿರಾಶ್ರಿತರು ಕುಳಿತರು. (ದಿಗ್ವಿಜಯ ನ್ಯೂಸ್​)

    ಬಸ್​ ಏರಿದ ಗರ್ಭಿಣಿ ನರ್ಸ್​ ಹೊರಡುವ ಮುನ್ನವೇ ಪತಿ ಕಣ್ಣೆದುರಲ್ಲೇ ದುರಂತ ಸಾವು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts