ಬಾಲಕಿಗೆ ಲೈಂಗಿಕ ಕಿರುಕುಳ; ಅಪರಾಧಿಗೆ 6 ವರ್ಷ ಜೈಲು

Court
Published on

ಬೆಂಗಳೂರು: ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ 6 ವರ್ಷ ಜೈಲು ಶಿಕ್ಷೆ ಹಾಗೂ 35 ಸಾವಿರ ರೂ. ದಂಡ ವಿಧಿಸಿ ಎಫ್ ಟಿಎಸ್ ಸಿ 1ನೇ ನ್ಯಾಯಾಲಯ ಆದೇಶೀಸಿದೆ.

ಪಟ್ಟೇನಹಳ್ಳಿ ಕೆರೆ ಬಳಿಯ ನಿವಾಸಿ ಎಚ್. ಶ್ರೀನಿವಾಸ್ ಎಂಬಾತ ಅಪರಾಧಿ. ದಂಡದ ಮೊತ್ತವನ್ನು ಬಾಲಕಿ ಪಾಲಕರಿಗೆ ನೀಡುವಂತೆ ನ್ಯಾಯಾಧೀಶ ಎನ್.ಎಂ. ರಮೇಶ್ ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.

ಕಳೆದ ವರ್ಷ ಮಾ. 30ರಂದು ಐದು ವರ್ಷದ ಬಾಲಕಿ ಶಾಲೆಗೆ ರಜೆ ಇದ್ದ ಕಾರಣಕ್ಕೆ ದೊಡ್ಡಮ್ಮನ ಮನೆಗೆ ಬಂದು ಮಕ್ಕಳೊಂದಿಗೆ ಆಟವಾಡುತ್ತಿತ್ತು. ಈ ವೇಳೆ ಬಾಲಕಿಯನ್ನು ಕರೆದು ತಬ್ಬಿಕೊಂಡು, ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ನೊಂದ ಬಾಲಕಿ, ತನ್ನ ತಾಯಿ ಬಳಿ ಅಳಲು ತೋಡಿಕೊಂಡಾಗ ಪಾಲಕರು ಜೆ.ಪಿ. ನಗರ ಠಾಣೆಗೆ ದೂರು ಸಲ್ಲಿಸಿದ್ದರು.

ತನಿಖಾಧಿಕಾರಿಗಳಾದ ಸೌಮ್ಯ ಮತ್ತು ಟಿ.ಎಸ್. ರಾಧಾಕೃಷ್ಣ ತನಿಖೆ ಕೈಗೊಂಡು ಅಪರಾಧಿ ಶ್ರೀನಿವಾಸ್‌ನ್ನು ಬಂಧಿಸಿದ್ದರು. ಸಾಕ್ಷಾೃಧಾರಗಳನ್ನು ಸಂಗ್ರಹಿಸಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net