

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 60 ವರ್ಷದ ವೃದ್ಧನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಎ್ಟಿಎಸ್‌ಸಿ 1ನೇ ನ್ಯಾಯಾಲಯದ ನ್ಯಾಯಾಧೀಶ ಎನ್.ಎಂ. ರಮೇಶ್ ತೀರ್ಪು ನೀಡಿದ್ದಾರೆ.
ಮೈಸೂರು ರಸ್ತೆಯ ನಾಯಂಡಹಳ್ಳಿ ಜನತಾ ಕಾಲನಿ ನಿವಾಸಿ ಅಬ್ದುಲ್ ಘನಿ (60) ಅಪರಾಧಿ. 10 ವರ್ಷ ಜೈಲು, 20 ಸಾವಿರ ದಂಡ ವಿಧಿಸಿದ ಕೋರ್ಟ್, ಸಂತ್ರಸ್ತ ಬಾಲಕಿಗೆ ದಂಡದ ಮೊತ್ತ ಹಾಗೂ ಡಿಎಲ್‌ಎಸ್‌ಎಯಿಂದ 1 ಲಕ್ಷ ರೂ. ಪರಿಹಾರ ನೀಡುವಂತೆ ೋಷಣೆ ಮಾಡಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.
2017ರ ಜೂ.25ರಂದು ಆರು ವರ್ಷದ ಬಾಲಕಿಯನ್ನು ಮನೆಗೆ ಕರೆದ ಅಪರಾಧಿ ಅಬ್ದುಲ್, ಆಕೆಯ ಬಟ್ಟೆಯನ್ನು ಬಿಚ್ಚಿ ಲೈಂಗಿಕ ದೌರ್ಜನ್ಯ ಎಸಗಿದ್ದ. ನೊಂದ ಬಾಲಕಿ ತನ್ನ ತಾಯಿ ಬಳಿ ಅಳಲು ತೋಡಿಕೊಂಡಿದ್ದಳು. ಈ ಬಗ್ಗೆ ಬಾಲಕಿ ತಾಯಿ ಕೊಟ್ಟ ದೂರಿನ ಮೇರೆಗೆ ಚಂದ್ರಾ ಲೇಔಟ್ ಠಾಣೆಯ ಅಂದಿನ ಪಿಎಸ್‌ಐ ರವಿಕುಮಾರ್, ಅಪರಾಧಿ ಅಬ್ದುಲ್‌ನನ್ನು ಬಂಧಿಸಿದ್ದರು. ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.