

Couple: ಮದುವೆಗೂ ಮೊದಲು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಜೋಡಿಗೆ ಸಾರ್ವಜನಿಕವಾಗಿ 100 ಛಡಿಯೇಟಿನ ಶಿಕ್ಷೆ ನೀಡಿದ ಘಟನೆ ಇಂಡೋನೇಷ್ಯಾದಲ್ಲಿ ಬುಧವಾರ (ಜೂನ್.5) ನಡೆದಿದೆ.
ಇಂಡೋನೇಷ್ಯಾದಲ್ಲಿ ಷರಿಯಾ ಕಾನೂನನ್ನು ಜಾರಿಗೊಳಿಸುವ ಪ್ರದೇಶ ಅಚೆ. ಇಂಡೋನೇಷ್ಯಾ 2022ರಲ್ಲಿ ವಿವಾಹೇತರ ಸಂಬಧದ ಮೇಲೆ ರಾಷ್ಟ್ರವ್ಯಾಪಿ ನಿಷೇಧವನ್ನು ಜಾರಿಗೆ ತಂದಿದ್ದರೂ, ಅದು 2025 ರವರೆಗೆ ಜಾರಿಗೆ ಬರುವುದಿಲ್ಲ.
ಈ ಪದ್ಧತಿಯನ್ನು ಅಮಾನವೀಯ ಮಾನವ ಹಕ್ಕುಗಳ ಸಂಘಟನೆ ಎಷ್ಟೇ ಟೀಕಿಸಿದರೂ ಸಹ ಸಾರ್ವಜನಿಕವಾಗಿ ಚಾಟಿಯೇಟು ಕೊಡುವುದಕ್ಕೆ ಇಲ್ಲಿ ಹೆಚ್ಚಿನ ಬೆಂಬಲವಿದೆ.
ಹೀಗಾಗಿ ಈ ಜೋಡಿಗೆ ಅಲ್ಲೇ ಇದ್ದ ಸಾರ್ವಜನಿಕ ಉದ್ಯಾನದಲ್ಲಿ ಹತ್ತು ಸೆಟ್ಗಳಲ್ಲಿ ಬೆತ್ತದಿಂದ ಛಡಿಯೇಟು ಕೊಡಲಾಯಿತು.
ಜೂಜಾಟ, ಮದ್ಯಪಾನ ಮತ್ತು ವ್ಯಭಿಚಾರ ಸೇರಿದಂತೆ ಹಲವಾರು ಅಪರಾಧಗಳಿಗೆ ಸಾಮಾನ್ಯ ಶಿಕ್ಷೆಯಾಗಿ ಆಚೆ ಜನಸಂಖ್ಯೆಯಲ್ಲಿ ಚಡಿಯೇಟು ಶಿಕ್ಷೆಗೆ ಬಲವಾದ ಬೆಂಬಲವಿದೆ.
ಲೈಂಗಿಕ ಸಂಬಂಧದ ಆರೋಪ ಸಾಬೀತಾದ ನಂತರ ಇಬ್ಬರು ಪುರುಷರಿಗೆ ಸಾರ್ವಜನಿಕವಾಗಿ 150 ಕ್ಕೂ ಹೆಚ್ಚು ಬಾರಿ ಛಡಿಯೇಟು ನೀಡಲಾಯಿತು. ಅಚೆಯಲ್ಲಿ ಸಲಿಂಗಕಾಮವನ್ನು ನಿಷೇಧಿಸಲಾಗಿದೆ. (ಏಜೆನ್ಸೀಸ್)