ಮುರಿದು ಬಿದ್ದ ಮಗಳ ಮದುವೆ: ದೇವಸ್ಥಾನದಲ್ಲೇ ವಿಷ ಸೇವಿಸಿದ ದಂಪತಿ | Daughter Marriage

Daughter Marriage
Published on

Daughter Marriage: ಇನ್ನೂ 18 ವರ್ಷ ಆಗದ ಮಗಳ ಮದುವೆಯನ್ನು ಅಧಿಕಾರಿಗಳು ನಿಲ್ಲಿಸಿದ್ದರಿಂದ ಮನನೊಂದು ದಂಪತಿಗಳು ದೇವಸ್ಥಾನದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ(ಜೂನ್​.3) ನಡೆದಿದೆ.

ವೆಲ್ದುರ್ಥಿ ಮಂಡಲದ ಬೋದುಲಗುಡೆಮ್‌ನ ಶಿವ ಮತ್ತು ಜ್ಯೋತಿ ದಂಪತಿಗಳು ತಮ್ಮ ಅಪ್ರಾಪ್ತ ಮಗಳ ಮದುವೆಯನ್ನು ನಿಶ್ಚಯಿಸಿದ್ದರು. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮದುವೆಯನ್ನು ನಿಲ್ಲಿಸಿ, ಹುಡುಗಿಯನ್ನು ಮೇಡಕ್‌ನ ಬಾಲಸದನ್‌ಗೆ ಸ್ಥಳಾಂತರಿಸಿದರು.

ಇದಾದ ನಂತರ, ದಂಪತಿಗಳು ದೇವಾಲಯದ ಆವರಣದಲ್ಲಿ ತಮ್ಮ ಪ್ರಾಣವನ್ನು ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net