

ಬೆಂಗಳೂರು : ಬಳ್ಳಾರಿ ರಸ್ತೆ ಮೇಕ್ರಿ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರನ್ನು ಚರಂಡಿಗೆ ಹರಿ ಬಿಡುತ್ತಿದ್ದ ಟ್ಯಾಂಕರ್ ಚಾಲಕನ ವಿರುದ್ಧ ಸದಾಶಿವನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಮೃತಹಳ್ಳಿ ನಿವಾಸಿ ಎಂ.ಆರ್. ಸುರೇಶ್ ನಾಯಕ್ (28) ಟ್ಯಾಂಕರ್ ಚಾಲಕ. ವಾಹನ ದಾಖಲೆ ಪರಿಶೀಲನೆ ನಡೆಸಿದಾಗ ನೋಂದಣಿ ಪತ್ರ, ಪರ್ಮಿಟ್ ಚಾಲ್ತಿಯಲ್ಲಿ ಇರಲಿಲ್ಲ. ಆದರಿಂದ ವಾಹನವನ್ನು ಜಪ್ತಿ ಮಾಡಿ ಯಶವಂತಪುರ ಆರ್‌ಟಿಒ ಅಧಿಕಾರಿಗಳಿಗೆ ಹಸ್ತಾಂತರ ಮಾಡಿರುವುದಾಗಿ ಸದಾಶಿವನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರ ಸ್ಥಳಗಳಿಂದ ಕೊಳಚೆ ನೀರು ತುಂಬಿಸಿಕೊಂಡು ಬಂದು ಸಂಬಂಧಪಟ್ಟ ಸ್ಥಳಕ್ಕೆ ಹೋಗಿ ವಿಲೇ ಮಾಡದೆ ಎಲ್ಲೆಂದರಲ್ಲಿ ವೇಸ್ಟೇಜ್ ಸುರಿಯುತ್ತಿದ್ದ. ಈ ಹಿಂದೆ ಹಲವು ಬಾರಿ ಮೇಕ್ರಿ ಸರ್ಕಲ್ ಅಂಡರ್ ಪಾಸ್‌ನ ಚರಂಡಿಗೆ ಕೊಳಚೆ ನೀರು ಬಿಡುತ್ತಿದ್ದ. ಚರಂಡಿ ತುಂಬಿ ರಸ್ತೆಯಲ್ಲಿ ಕೊಳಚೆ ನೀರು ಹರಿದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿತ್ತು. ಆದರಿಂದ ಟ್ಯಾಂಕರ್ ಮೇಲೆ ನಿಗಾ ವಹಿಸಿ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.