ಸಾರ್ವಜನಿಕರಿಗೆ ಅನ್ನಸಂತರ್ಪಣೆ

ಮದ್ದೂರಲ್ಲಿ ಗಿರೀಶ್-ಶೈಲಜಾ ದಂಪತಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿದರು.
ಮದ್ದೂರಲ್ಲಿ ಗಿರೀಶ್-ಶೈಲಜಾ ದಂಪತಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿದರು.
Published on

ಮದ್ದೂರು: ಪಟ್ಟಣದ ಪೇಟೆ ಬೀದಿಯಲ್ಲಿ ತರಕಾರಿ ವ್ಯಾಪಾರ ಮಾಡುವ ಗಿರೀಶ್-ಶೈಲಜಾ ದಂಪತಿ ಚಿತ್ರನಟ ದಿ.ಪುನೀತ್ ರಾಜ್ ಕುಮಾರ್ ಅವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿದರು.

ಪುನೀತ್‌ರಾಜ್‌ಕುಮಾರ್ ಅವರು ಬದುಕಿದ್ದ ಸಂದರ್ಭದಲ್ಲಿ ಮಾಡಿದ ಹಲವಾರು ಸಮಾಜ ಮುಖಿ ಕಾರ್ಯಕ್ರಮ ಸಾವಿರಾರು ಕುಟುಂಬಗಳ ಬಾಳಿಗೆ ಬೆಳಕಾಗಿದೆ. ಅವರು ಮಾಡಿರುವ ಒಳ್ಳೆಯ ಕಾರ್ಯಗಳು ಸೂರ್ಯ, ಚಂದ್ರ ಇರುವ ತನಕ ಶಾಶ್ವತ ಎಂದು ತರಕಾರಿ ವ್ಯಾಪಾರಿ ಗಿರೀಶ್ ಬಣ್ಣಿಸಿದರು. ಇದೇ ವೇಳೆ ಪುನೀತ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net