ಮುಂಬೈ ಪ್ರಯಾಣದ ಪ್ರಮುಖ ರೈಲುಗಳ ಸಂಚಾರ ಮೊಟಕು

ರೈಲುಗಳ ಸಂಚಾರವನ್ನು ದಾದರ್ ಮತ್ತು ಠಾಣೆ ನಿಲ್ದಾಣಗಳಲ್ಲೇ ಭಾಗಶಃ ರದ್ದುಗೊಳಿಸುವ  ಅವಧಿಯನ್ನು ಮಧ್ಯ ರೈಲ್ವೆಯು ಮತ್ತಷ್ಟು ವಿಸ್ತರಿಸಿದೆ.
ರೈಲುಗಳ ಸಂಚಾರವನ್ನು ದಾದರ್ ಮತ್ತು ಠಾಣೆ ನಿಲ್ದಾಣಗಳಲ್ಲೇ ಭಾಗಶಃ ರದ್ದುಗೊಳಿಸುವ ಅವಧಿಯನ್ನು ಮಧ್ಯ ರೈಲ್ವೆಯು ಮತ್ತಷ್ಟು ವಿಸ್ತರಿಸಿದೆ.
Published on
ಮಂಗಳೂರು: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ವಿಸ್ತರಣೆ ಕಾಮಗಾರಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಕೆಲವು ಪ್ರಮುಖ ರೈಲುಗಳ ಸಂಚಾರವನ್ನು ದಾದರ್ ಮತ್ತು ಠಾಣೆ ನಿಲ್ದಾಣಗಳಲ್ಲೇ ಭಾಗಶಃ ರದ್ದುಗೊಳಿಸುವ ಅವಧಿಯನ್ನು ಮಧ್ಯ ರೈಲ್ವೆಯು ಮತ್ತಷ್ಟು ವಿಸ್ತರಿಸಿದೆ. ಈ ನಿಯಮವು ಮುಂದಿನ 25 ದಿನಗಳವರೆಗೆ, ಅಂದರೆ 12 ಜೂನ್‌ವರೆಗೆ ಜಾರಿಯಲ್ಲಿರಲಿದೆ ಎಂದು ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ತಿಳಿಸಿದ್ದಾರೆ.
ಮೇ 27 ರಿಂದ ಜೂನ್ 12 ರವರೆಗೆ ಮಡ್ಗಾಂವ್‌ನಿಂದ ಹೊರಡುವ ಮಡ್ಗಾಂವ್ - ಮುಂಬೈ ಸಿಎಸ್‌ಎಂಟಿ ತೇಜಸ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 22120) ರೈಲು ಮುಂಬೈ ಸಿಎಸ್‌ಎಂಟಿ ಬದಲಿಗೆ ದಾದರ್ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಮೇ 27 ರಿಂದ ಜೂನ್ 12 ರವರೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ ಮಂಗಳೂರು ಜಂಕ್ಷನ್ - ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12134) ರೈಲನ್ನು ಮುಂಬೈ ಸಿಎಸ್‌ಎಂಟಿ ಬದಲಿಗೆ ಠಾಣೆ ನಿಲ್ದಾಣದಲ್ಲೇ ಮೊಟಕುಗೊಳಿಸಲಾಗುತ್ತದೆ.
ಕಾಮಗಾರಿಯ ಕಾರಣದಿಂದಾಗಿ ರೈಲುಗಳ ವೇಳಾಪಟ್ಟಿಯಲ್ಲಿ ಈ ತಾತ್ಕಾಲಿಕ ಬದಲಾವಣೆ ಮಾಡಲಾಗಿದ್ದು, ಮಂಗಳೂರು ಮತ್ತು ಗೋವಾ ಭಾಗದಿಂದ ಮುಂಬೈಗೆ ಪ್ರಯಾಣಿಸುವ ಸಾರ್ವಜನಿಕರು ಇದನ್ನು ಗಮನಿಸಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ. ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲತೆಗೆ ರೈಲ್ವೆ ಇಲಾಖೆ ವಿಷಾದಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net