42 ಮಹಿಳೆಯರನ್ನು ಹತ್ಯೆಗೈದ ಸರಣಿ ಹಂತಕನ ಬಂಧನ!

kenya
Published on

ನೈರೋಬಿ(ಕೀನ್ಯಾ): 42 ಮಹಿಳೆಯರನ್ನು ಹತ್ಯೆಗೈದ ಶಂಕಿತ ಸರಣಿ ಹಂತಕನನ್ನು ಕೀನ್ಯಾ ಪೊಲೀಸರು ಬಂಧಿಸಿದ್ದಾರೆ.

ರಾಜಧಾನಿಯ ನೈರೋಬಿಯಾದಲ್ಲಿ ಕಸ ಎಸೆಯುವ ಸ್ಥಳವಾಗಿ ಬಳಸಲಾಗಿದ್ದ ಕ್ವಾರಿಯಲ್ಲಿ ಒಂಬತ್ತು ಮಹಿಳೆಯರ ಛಿದ್ರಗೊಂಡ ಶವಗಳು ಪತ್ತೆಯಾದ ನಂತರ ಪೊಲೀಸರು 33 ವರ್ಷದ ಕಾಲಿನ್ಸ್ ಜುಮೈಸಿ ಖಲುಶಾನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ದುಷ್ಕೃತ್ಯ ಬೆಳಕಿಗೆ ಬಂದಿದೆ.

ಖಲುಶಾ, ತನ್ನ ಹೆಂಡತಿ ಸೇರಿದಂತೆ 42 ಮಹಿಳೆಯರನ್ನು ಆಮಿಷವೊಡ್ಡಿ ಕೊಂದು ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ನಿರ್ದೇಶಕ ಮೊಹಮದ್ ಐ. ಅಮೀನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ 42 ಮಹಿಳೆಯರನ್ನು ಕೊಂದಿರುವುದಾಗಿ ಖಲುಶಾ ತಪ್ಪೊಪ್ಪಿಕೊಂಡಿದ್ದಾನೆ. ಹತ್ಯೆಗಳ ಹಿಂದಿನ ಉದ್ದೇಶವನ್ನು ಇನ್ನೂ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ರಾಜಕೀಯ ಪ್ರಕ್ಷುಬ್ಧತೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದಿಂದ ನಲುಗುತ್ತಿರುವ ದೇಶದಲ್ಲಿ ಇದೀಗ ಆಘಾತಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. 55 ಮಿಲಿಯನ್ ಜನರಿರುವ ಕೀನ್ಯಾವನ್ನು ಈ ಘಟನೆ ಬೆಚ್ಚಿಬೀಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net