ರೀಲ್ಸ್​ಗಾಗಿ ಸುರಿವ ಮಳೆಯಲ್ಲಿ ಯುವಕರ ಬೈಕ್ ಸ್ಟಂಟ್.. ಕೊನೆಗೆ ಏನಾಯ್ತು?

stunt
Published on

ಹೈದರಾಬಾದ್: ರೀಲ್ಸ್​ ಹುಚ್ಚು ಎಂತಹವರನ್ನೂ ಸೆಳೆದುಕೊಳ್ಳುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗಲು ಯುವಕರು ಹುಚ್ಚು ಸಾಹಸಗಳಿಗೆ ಕೈಹಾಕುತ್ತಿದ್ದಾರೆ. ಇದರ ಪರಿಣಾಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹದ್ದೇ ಘಟನೆಯೊಂದು ಶನಿವಾರ(ಜು.21) ಹೈದರಾಬಾದ್​ನಲ್ಲಿ ನಡೆದಿದೆ.

ಭಾರಿ ಮಳೆಯಲ್ಲಿ ಹೈದರಾಬಾದ್-ವಿಜಯವಾಡ ಹೆದ್ದಾರಿಯ ಅಂಬರ್ ಪೇಟೆಯಲ್ಲಿ ಬೈಕ್‌ನಲ್ಲಿ ಸ್ಟಂಟ್ಸ್​ ಮತ್ತು ರೀಲ್ಸ್​ಗಾಗಿ ವೀಡಿಯೋ ಮಾಡುತ್ತ ಇಬ್ಬರು ಯುವಕರು ಹೊರಟಿದ್ದರು. ಇವರಲ್ಲಿ ಸವಾರ ಬೈಕ್ ಸ್ಟಂಟ್ ಮಾಡುತ್ತಿದ್ದರೆ, ಹಿಂಬದಿ ಕುಳಿತಿದ್ದ ಮತ್ತೊಬ್ಬ ಯುವಕ ವಿಡಿಯೋ ಮಾಡುತ್ತಿದ್ದಾನೆ.

ಸವಾರ ಶಿವ ಚಲಿಸುತ್ತಿದ್ದ ಬೈಕ್‌ನ ಮುಂದಿನ ಚಕ್ರವನ್ನು ಏಕಾಎಕಿ ಮೇಲೆತ್ತಿದ್ದಾನೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ನೇಹಿತರು ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಶಿವ ಮೃತಪಟ್ಟಿದ್ದು, ಬೈಕ್ ಚಲಾಯಿಸುತ್ತಿದ್ದ ಯುವಕ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬೈಕ್​ನಲ್ಲಿ ಹಿಂದೆ ಕುಳಿತಿದ್ದ ಮಗನ ಸಾವಿನ ಸುದ್ದಿ ಕೇಳಿ ತಂದೆ ತಾಯಿಗೆ ಬರಸಿಡಿಲು ಬಡಿದಂತಾಗಿದೆ. ಅವರ ದುಃಖದ ಕಟ್ಟೆ ಒಡೆದಿದ್ದು ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net