ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೀರಿಯಲ್​ ನಟಿ ಯಶಸ್ವಿನಿ ರವೀಂದ್ರ; ಫೋಟೋ ನೋಡಿ

yashaswini
Published on

ಬೆಂಗಳೂರು: ಕಿರುತೆರೆಯಲ್ಲಿ ಮಿಂಚಿದ್ದ ನಟಿ ಯಶಸ್ವಿನಿ ರವೀಂದ್ರ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಫೊಟೋಗಳು ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿಯಲ್ಲಿ ರಚನಾ ಪಾತ್ರಕ್ಕೆ ಜೀವ ತುಂಬಿದ್ದವರು ಯಶಸ್ವಿನಿ ರವೀಂದ್ರ. ನಟಿ ಯಶಸ್ವಿನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾಗಿದ್ದಾರೆ.

ಬಹುಕಾಲದ ಗೆಳೆಯ ಚೇತನ್ ರಾಜ್ ಜತೆ ನಟಿ ಯಶಸ್ವಿನಿ ರವೀಂದ್ರ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ನಟಿ ಮದುವೆಯಾಗಿದ್ದಾರೆ.

ಇಬ್ಬರು ವೈಟ್ ಅಂಡ್ ವೈಟ್ ಮದುವೆ ಡ್ರೆಸ್‍ನಲ್ಲಿ ಮುದ್ದಾಗಿ ಕಾಣ್ತಾ ಇದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್​​ ಮಾಡುವ ಮೂಲಕವಾಗಿ ಶುಭಕೊರಿದ್ದಾರೆ.

ಕಮಲಿ ಧಾರಾವಾಹಿ ಕೆಲ ತಿಂಗಳ ಹಿಂದೆ ಮುಕ್ತಾಯವಾಗಿದೆ. ಕಮಲಿ ಧಾರಾವಾಹಿಯಲ್ಲಿ ಎಲ್ಲಾ ಪಾತ್ರಗಳು ಜನರಿಗೆ ಇಷ್ಟ ಆಗಿದ್ವು. ಅದೇ ರೀತಿ ರಿಷಿ ತಂಗಿ ಪಾತ್ರ ಮಾಡಿದ್ದ ರಚನಾ ಅವರು ಸಹ ಎಲ್ಲರ ಗಮನ ಸೆಳೆದಿದ್ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net