

ಎನ್.ಎಲ್.ಶಿವಮಾದು
ಬೆಂಗಳೂರು ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ)ಯು ದ್ವಿಭಾಷಾ ಮಾಧ್ಯಮವನ್ನು ಶಿಾರಸು ಮಾಡಿರುವ ನಡುವೆಯೂ ಒಂದು ಭಾಷೆಯಾಗಿ ಕಲಿಯಲು ತೃತೀಯ ಭಾಷೆಗೆ ಅವಕಾಶ ಕಲ್ಪಿಸಿದೆ ಎನ್ನಲಾಗಿದೆ.
ಪ್ರೊ. ಸುಖದೇವ್ ಥೋರಟ್ ಅಧ್ಯಕ್ಷತೆ ಸಮಿತಿಯು ನೀಡಿರುವ ವರದಿಯಲ್ಲಿ 5ನೇ ತರಗತಿವರೆಗೂ ಕನ್ನಡ/ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು. ಪ್ರಥಮ ಭಾಷೆಯಾಗಿ ಕನ್ನಡ ಹಾಗೂ ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಬೋಧಿಸಬೇಕು ಎಂಬ ಶಿಾರಸು ಮಾಡಿದೆ. ಇದೇ ಕಾರಣದಿಂದ ತಮಿಳು, ತೆಲುಗು, ಉರ್ದು, ಮರಾಠಿ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಹೇಗೆ ಅನುಷ್ಠಾನ ಮಾಡುವುದು ಎಂಬ ಗೊಂದಲ ಎಲ್ಲರಲ್ಲಿಯೂ ಮೂಡಿದೆ.
ಮಾತೃಭಾಷೆ/ಇಂಗ್ಲಿಷ್ ಯಾವುದೆಂದು ನಿರ್ಧರಿಸಿ:
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಮಾತೃಭಾಷೆ ಆಯ್ಕೆ ಮಾಡಿಕೊಳ್ಳುವುದು ಪಾಲಕರು/ವಿದ್ಯಾರ್ಥಿಗಳ ಹಕ್ಕು ಎಂದು ಖಾಸಗಿ ಶಾಲೆಗಳು ವಾದ ಮಾಡುತ್ತಿವೆ. ಇದಕ್ಕೂ ಎಸ್‌ಇಪಿಯಲ್ಲಿ ಪರಿಹಾರ ಕಲ್ಪಿಸಲಾಗಿದೆ. ಆದರೆ, ಎಸ್‌ಇಪಿಯಲ್ಲಿ ಮಾತೃಭಾಷೆ ಮತ್ತು ಜಾಗತಿಕ ಭಾಷೆ ಇಂಗ್ಲಿಷ್ ಈ ಎರಡಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ತಿಳಿದು ಬಂದಿದೆ.
ಒಂದು ವೇಳೆ ಮಾತೃ ಭಾಷೆಯನ್ನು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಂಡಲ್ಲಿ ದ್ವಿತೀಯ ಭಾಷೆಯಾಗಿ ಕನ್ನಡ ಕಲಿಯಬೇಕಾಗುತ್ತದೆ. ತೃತೀಯ ಭಾಷೆಯಾಗಿ ಇಂಗ್ಲಿಷ್ ಕಲಿಸಬೇಕಾಗುತ್ತದೆ. ಒಂದು ವೇಳೆ ಇಂಗ್ಲಿಷ್ ಬೇಕು ಎನಿಸಿದಲ್ಲಿ ಮಾತೃಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಯಬೇಕಾಗುತ್ತದೆ. ಆದ್ದರಿಂದ ಶಾಲೆಗಳು ತಮ್ಮ ಭಾಷಾ ಮಾಧ್ಯಮ ಆಯ್ಕೆ ಯಾವುದೆಂದು ಸ್ಪಷ್ಟತೆ ಹೊಂದಬೇಕಿದೆ.
ಲೆಕ್ಕಕ್ಕಿಲ್ಲದ ತೃತೀಯ ಭಾಷೆ
ತೃತೀಯ ಭಾಷೆ ಕಲಿಯುವ/ಕಲಿಸುವ ಪ್ರಕ್ರಿಯೆಗೂ ಎಸ್‌ಇಪಿ ಮನ್ನಣೆ ನೀಡಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ತೃತೀಯ ಭಾಷೆಯು ಪರೀಕ್ಷೆ ಮತ್ತು ಅಂಕದ ವಿಚಾರ ಬಂದಾಗ ಮೊದಲ ಎರಡು ಭಾಷೆಗಳಿಗಷ್ಟೇ ಆದ್ಯತೆ ನೀಡಿದೆ. ತೃತೀಯ ಭಾಷೆಯನ್ನು ಕಲಿಕೆಗೆ ಸೀಮಿತಗೊಳಿಸಿದೆ. ಹೀಗಾಗಿ, ತೃತೀಯ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ಇರುವುದಿಲ್ಲ.
ಕನ್ನಡ ಕಡ್ಡಾಯ
ಎಸ್‌ಇಪಿ ಪ್ರಕಾರ ಮಾಧ್ಯಮ ಯಾವುದಿದ್ದರೂ ಮಾತೃಭಾಷೆ ಜತೆಗೆ ಕನ್ನಡ ಕಲಿಯಲೇಬೇಕಿದೆ. ಕರ್ನಾಟಕದಲ್ಲಿ ಅಧಿಕೃತ ಭಾಷೆಯಾದ ಕನ್ನಡವನ್ನು ಇಲ್ಲಿ ನೆಲೆಸಿರುವ ಜನರಿಗೆ ಕಲಿಸಬೇಕು ಮತ್ತು ರಾಜ್ಯದಲ್ಲಿ ಬಹುಸಂಖ್ಯಾತ ಭಾಷಿಕರಾಗಿರುವ ಜನರು ಕನ್ನಡ ಕಲಿಯಬೇಕು ಎನ್ನುವುದು ರಾಜ್ಯ ಶಿಕ್ಷಣ ನೀತಿಯ ಆಶಯವಾಗಿದೆ ಎನ್ನಲಾಗಿದೆ.
ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯನ್ನು ಜಾರಿಗೊಳಿಸಲು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಆಯಾಮಗಳಿಂದಲೂ ಪರಿಶೀಲಿಸಬೇಕಿದ್ದು, ಕಾನೂನು ಚೌಕಟ್ಟಿನಲ್ಲಿ ಮಾತ್ರ ಸಾಧ್ಯವಾಗದು. ಜತೆಗೆ ಭಾಷೆ ಕಲಿಕೆಗೆ ಸಂಶೋಧನೆ ಮತ್ತು ಭಾಷಾ ಕಲಿಕೆಯ ಮನೋವಿಜ್ಞಾನದ ಆಯಾಮಗಳಿಂದಲೂ ವಿಮರ್ಶಿಸಬೇಕಿದೆ ಎಂದಿದೆ.
ಪರಿಸರ ಭಾಷೆಯೇ ಮಾತೃಭಾಷೆ ರಾಜ್ಯದಲ್ಲಿ ಮನೆಮಾತಾಗಿ ಆಡುವ ಭಾಷೆಗೂ ಪರಿಸರದಲ್ಲಿ ಪ್ರಭಾವಿಯಾಗಿ ಆಡುವ ಭಾಷೆಗೂ ಹಲವು ಭಾಗಗಳಲ್ಲಿ ವ್ಯತ್ಯಾಸಗಳಿವೆ. ಕರ್ನಾಟಕದಲ್ಲಿ ಕೊಡವ, ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ, ಲಂಬಾಣಿ ಸೇರಿ ಲಿಪಿ ಇಲ್ಲದ ಎಷ್ಟೋ ಭಾಷೆಗಳಿವೆ. ಆಯಾ ಪ್ರದೇಶದಲ್ಲಿ ಸಂವಹನದ ಸಮಾನ ಭಾಷೆಯಾಗಿ ಬಳಸುವ ಪರಿಸರ ಭಾಷೆ ಎಂದರೆ ಅದು ಕನ್ನಡವಾಗಿದೆ. ಈ ಪರಿಸರ ಭಾಷೆ ರಾಜ್ಯ ಭಾಷೆಯಾಗಿದೆ. ಭಾಷಾವಾರು ಪ್ರಾಂತ ರಚನೆಯ ಉದ್ದೇಶದನ್ವಯ ಕನ್ನಡವನ್ನೇ ರಾಜ್ಯಭಾಷೆಯಾಗಿ ೋಷಿಸಲಾಗಿದೆ. ಇದು ಸಂವಿಧಾನದಲ್ಲಿ ಅಂಗೀಕೃತಗೊಂಡ ಪ್ರಾದೇಶಿಕ ಭಾಷೆಯಾಗಿದೆ. ಕನ್ನಡ ಕರ್ನಾಟಕದ ರಾಜ್ಯಭಾಷೆಯಾಗಿದ್ದು, ಇದೇ ಪರಿಸರ ಭಾಷೆಯಾಗಿರುವುದರಿಂದ ಸಹಜವಾಗಿ ಮಾತೃಭಾಷೆಯಾಗಿ ನಿರ್ವಹಿಸಬೇಕಾದ ಅಗತ್ಯವಿದೆ ಎಂಬುದನ್ನು ಸಮಿತಿ ತಿಳಿಸಿದೆ ಎನ್ನಲಾಗಿದೆ.