ಪಾತಾಳಕ್ಕಿಳಿದ ಸೆನ್ಸೆಕ್ಸ್​; ಒಟ್ಟು 4.34 ಲಕ್ಷ ಕೋಟಿ ರೂ. ಕಳಕೊಂಡ ಹೂಡಿಕೆದಾರರು!

market crash
Published on

ನವದೆಹಲಿ: ಸ್ಟಾಕ್ ಮಾರ್ಕೆಟ್​ ಪ್ರಪಂಚದಲ್ಲಿ ಅಮೆರಿಕ ಸೀನಿದಾಗ ಜಗತ್ತಿಗೇ ನೆಗಡಿ ಉಂಟಾಗುತ್ತದೆ ಎನ್ನುವ ಮಾತಿದೆ. ಈ ಘಟನೆಯೂ ಅದೇ ಮಾದರಿಯಲ್ಲಿ ನಡೆದಿದೆ ಎನ್ನಬಹುದು.

ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ದಿವಾಳಿಯಾಗಿದ್ದು ಎಲ್ಲರಿಗೂ ಗೊತ್ತಿದೆ. ಇದರಿಂದ ಉಂಟಾದ ಬಿಕ್ಕಟ್ಟು ಶುಕ್ರವಾರ ವಾಲ್ ಸ್ಟ್ರೀಟ್ಅನ್ನು ಬೀಳಿಸಿತ್ತು. ಇಂದು (ಮಾ.13) ಅದರ ಪರಿಣಾಮ ರಂದು ಜಾಗತಿಕ ಮಾರುಕಟ್ಟೆಗಳಲ್ಲಿ ಕಾಣಸಿಕ್ಕಿದೆ. ಸೆನ್ಸೆಕ್ಸ್ 897 ಅಂಕಗಳ ನಷ್ಟದೊಂದಿಗೆ 58,237.85 ಅಂಕಗಳಿಗೆ ತಲುಪಿದ್ದು ನಿಫ್ಟಿ 258.60 ಅಂಕ ಕುಸಿದು 17,154ಕ್ಕೆ ಬಂದಿದೆ. ಇದು ಐದು ತಿಂಗಳ ಕನಿಷ್ಠ ಮಟ್ಟವಾಗಿದೆ.

ಸುಮಾರು 764 ಷೇರುಗಳು ಲಾಭದಲ್ಲೇ ಮುಂದುವರಿದಿದ್ದು 2,748 ಷೇರುಗಳು ಕುಸಿತ ಕಂಡಿವೆ. ಒಟ್ಟು ಷೇರುಗಳಲ್ಲಿ 145 ಷೇರುಗಳ ಮೌಲ್ಯ ಬದಲಾಗಿಲ್ಲ. ವಾಸ್ತವವಾಗಿ, ನಿಫ್ಟಿ ಬಜೆಟ್ ದಿನದ ಕನಿಷ್ಠ 17,255.20 ಕ್ಕಿಂತ ಕಡಿಮೆಯಾಗಿದೆ. ಇದರಿಂದಾಗಿ ಜಾಗತಿಕವಾಗಿ ಎಲ್ಲಾ ವಲಯದ ಹೂಡಿಕೆದಾರರು ಒಟ್ಟಾರೆಯಾಗಿ 4.35 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.

ಅಮೆರಿಕದಲ್ಲಿ ಅನೇಕ ಸ್ಟಾರ್ಟ್ ಅಪ್‌ಗಳಿಗೆ ಬ್ಯಾಂಕಿಂಗ್ ಪಾಲುದಾರರಾದ ಸಿಲಿಕಾನ್ ವ್ಯಾಲಿ ಬ್ಯಾಂಕ್​ನ ವೈಫಲ್ಯ ಹೂಡಿಕೆದಾರರ ಭಾವನೆಯನ್ನು ಹಾಳುಮಾಡಿದ್ದು 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಇದು ಅತಿದೊಡ್ಡ ರಿಟೇಲ್​ ಬ್ಯಾಂಕಿಂಗ್ ವೈಫಲ್ಯವಾಗಿದೆ. ಫೆಡರಲ್ ನಿಯಂತ್ರಕರು ಮಧ್ಯಪ್ರವೇಶಿಸಿ ಠೇವಣಿದಾರರಿಗೆ 'ಅವರ ಎಲ್ಲಾ ಹಣವನ್ನು' ಮರಳಿ ಪಡೆಯಲು ಭರವಸೆ ನೀಡಿದರೂ, ಜನರ ಭಯವನ್ನು ಶಮನಗೊಳಿಸಲು ಇದು ಸಾಕಾಗಿಲಿಲ್ಲ. 

ಭಾರತದ CPI ಹಣದುಬ್ಬರ

ಭಾರತದ ಮುಖ್ಯ ಚಿಲ್ಲರೆ ಹಣದುಬ್ಬರವು ಜನವರಿಯ ಮೂರು ತಿಂಗಳ ಗರಿಷ್ಠವಾದ 6.52 ಪ್ರತಿಶತದಿಂದ ಫೆಬ್ರವರಿ 2023 ರಲ್ಲಿ ಸ್ವಲ್ಪಮಟ್ಟಿಗೆ ಇಳಿಯುವ ನಿರೀಕ್ಷೆಯಿದೆ. ಅರ್ಥಶಾಸ್ತ್ರಜ್ಞರ ಸಮೀಕ್ಷೆಯ ಪ್ರಕಾರ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಕಳೆದ ತಿಂಗಳು ಕೇವಲ 6.4 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ನಿರೀಕ್ಷಿಸಲಾಗಿದೆ. ಅಂದಾಜುಗಳು 5.89 ಪ್ರತಿಶತ ಮತ್ತು 6.62 ಪ್ರತಿಶತದ ನಡುವೆ ಇರುತ್ತವೆ. ಇದು ಹೆಚ್ಚಿನ ದೀರ್ಘಾವಧಿಯ ಬಡ್ಡಿದರಗಳನ್ನು ಸೂಚಿಸಬಹುದು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net