ಬೆಂಗಳೂರಿನ ಸೋಸಲೆ ವ್ಯಾಸರಾಜ ಮಠದಲ್ಲಿ ವಿದ್ಯಾರ್ಥಿಗಳಿಗಾಗಿ ಧಾರ್ಮಿಕ ಶಿಬಿರ

New Project
Published on

ಬೆಂಗಳೂರು: ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಧಾರ್ಮಿಕ ಸಂಸ್ಕಾರವನ್ನು ಹೇಳಿಕೊಡುವ ನಿಟ್ಟಿನಲ್ಲಿ ಬೆಂಗಳೂರಿನ ಸೋಸಲೆ ಶ್ರೀವ್ಯಾಸರಾಜ ಮಠದಲ್ಲಿ ಆಯೋಜಿಸಿರುವ ಧಾರ್ಮಿಕ ಶಿಬಿರವನ್ನು ಹಿರಿಯ ವಿದ್ವಾಂಸರಾದ ಮೈಸೂರಿನ ವಿಜಯಿಂದ್ರಾಚಾರ್ಯರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಭಾರತವು ವಿಶ್ವಗುರು ಆಗುವ ನಿಟ್ಟಿನಲ್ಲಿ ಆಧ್ಯಾತ್ಮ ಜ್ಞಾನದ ಕೊಡುಗೆ ಎನ್ನುವ ವಿಷಯದ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾಪೀಠದ ಗೌರವ ಕಾರ್ಯದರ್ಶಿಗಳಾದ ಡಾ. ಡಿ.ಪಿ ಮಧುಸೂಧನಾಚಾರ್ಯರು, ವ್ಯವಸ್ಥಾಪಕರಾದ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

ಸೋಸಲೆ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದರ ಆಶಯದಂತೆ ವ್ಯಾಸರಾಜ ಮಠದಲ್ಲಿ ಹಮ್ಮಿಕೊಂಡಿರುವ ಶ್ರೀವ್ಯಾಸಶ್ರೀಶ ಧಾರ್ಮಿಕ ಶಿಬಿರದಲ್ಲಿ ರಾಜ್ಯದ ವಿವಿದೆಡೆಯಿಂದ 40ಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಶಿಬಿರದಲ್ಲಿ ಸಂಧ್ಯಾವಂದನೆ, ದೇವಪೂಜಾ ಪದ್ಧತಿ ,ಸ್ತೋತ್ರಪಾಠ ಮುಂತಾದ ವಿಭಾಗದಲ್ಲಿ ಪಾಠಗಳನ್ನು ಹೇಳಿಕೊಡಲಾಗುವುದು. ಶ್ರೀವ್ಯಾಸತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಶ್ರೀನಿಧಿ ಆಚಾರ್ಯ ಪ್ಯಾಟಿ ಮತ್ತು ಶ್ರೀಕಾಂತ ಕಳಸಾಪುರ ಆಚಾರ್ಯ, ಪುಷ್ಕರಾಚರ್ಯರು ಶಿಬಿರದ ಉಸ್ತುವಾರಿ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net