

ಮಂಗಳೂರು: ಕೇಂದ್ರ ಸರ್ಕಾರದ ಕಾನೂನು ಇಲಾಖೆಯಲ್ಲಿ ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಸುದರ್ಶನ್ ಕುಡುಪು (53) ಅವರು ಗುರುವಾರ ಬೆಂಗಳೂರಿನಲ್ಲಿ ನಿಧನರಾದರು.ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಲಕಾರಿಯಾಗದೆ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೇಂದ್ರೀಯ ತನಿಖಾ ತಂಡ (ಸಿಬಿಐ)ದ ವಿವಿಧ ಕೇಂದ್ರಗಳಲ್ಲಿ ಸಿಬಿಐ ಪರ ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿದ್ದರು. ಅವರ ಅತ್ಯುತ್ತಮ ಸೇವೆಗೆ ‘ಉತ್ಕೃಷ್ಟ ಸೇವಾ ಪದಕ’ವನ್ನ್ನೂ ಪಡೆದಿದ್ದರು. ಮಂಗಳೂರು ಹೊರವಲಯದ ಕುಡುಪುವಿನಲ್ಲಿ ಹುಟ್ಟಿ ಬೆಳೆದ ಅವರು ಹೊಸದಿಲ್ಲಿಯಲ್ಲಿ ಸೇವಾ ನಿರತರಾಗಿದ್ದರು. ಹುಟ್ಟೂರಿನೊಂದಿಗೆ ನಿರಂತರವಾಗಿ ಸಂಬಂಧ ಇರಿಸಿಕೊಂಡಿದ್ದ ಅವರು, ಸರಳ ವ್ಯಕ್ತಿತ್ವ, ನಗು, ಮೃದು ಸ್ವಭಾವದಿಂದ ಊರಿನಲ್ಲಿ ಆಪ್ತರಾಗಿದ್ದರು. ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಮತ್ತು ಕುಡುಪು ಭಟ್ರ ಕಲ್ಲುರ್ಟಿ ದೈವದ ಪರಮ ಭಕ್ತರಾಗಿದ್ದರು. ಅವರ ಅಂತ್ಯ ಸಂಸ್ಕಾರ ಶುಕ್ರವಾರ ಬೆಳಗ್ಗೆ 10.30ಕ್ಕೆ ಶಕ್ತಿನಗರ ರುದ್ರಭೂಮಿಯಲ್ಲಿ ನಡೆಯಲಿದೆ.