

ರಾಣೆಬೆನ್ನೂರ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ಇತ್ತೀಚೆಗೆ ಹಾವೇರಿಯಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ನಗರದ ಟಿ.ಎಸ್. ಹಾಲಗೇರಿ ಹಾಗೂ ಪಾರ್ವತೆವ್ವ ಹಾಲಗೇರಿ ಪಾಲ್ಗೊಂಡು ವಿವಿಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಟಿ.ಎಸ್. ಹಾಲಗೇರಿ ಅವರು 80ರಿಂದ 90 ವರ್ಷ ವಯೋಮಿತಿಯಲ್ಲಿ ಗಾಯನ ಸ್ಪರ್ಧೆಯಲ್ಲಿ ಪ್ರಥಮ, ಏಕಾಭಿನಯ ಪಾತ್ರದಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ. ಪಾರ್ವತೆವ್ವ 70ರಿಂದ 80 ವರ್ಷ ವಯೋಮಿತಿಯಲ್ಲಿ ಬಿರುಸಿನ ನಡಿಗೆ, ಗಾಯನ ಸ್ಪರ್ಧೆ, ಏಕಾಭಿನಯ ಪಾತ್ರದಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.