ರಾಜ್ಯಮಟ್ಟಕ್ಕೆ ಆಯ್ಕೆಯಾದ ಹಿರಿಯ ದಂಪತಿ

IMG-20231002-WA0026
Published on

ರಾಣೆಬೆನ್ನೂರ: ಹಾವೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಿರಿಯ ನಾಗಕರಿಕರ ಕ್ರೀಡಾಕೂಟದಲ್ಲಿ ನಗರದ ಹಿರಿಯ ದಂಪತಿ ತಿರಕಪ್ಪ ಹಾಲಗೇರಿ ಹಾಗೂ ಪಾರ್ವತಮ್ಮ ಹಾಲಗೇರಿ ವಿವಿಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಿರಕಪ್ಪ ಹಾಲಗೇರಿ 80ರಿಂದ 90 ವರ್ಷ ವಯೋಮಿತಿ ವಿಭಾಗದಲ್ಲಿ ರಿಂಗ್‌ನ್ನು ಬಕೆಟ್‌ನಲ್ಲಿ ಹಾಕುವ ಸ್ಪರ್ಧೆಯಲ್ಲಿ ಪ್ರಥಮ, 100 ಮೀಟರ್ ನಡಿಗೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಪಾರ್ವತಮ್ಮ ಹಾಲಗೇರಿ ಮ್ಯೂಸಿಕಲ್ ಚೇರ್ ಹಾಗೂ ಏಕ ಪಾತ್ರಾಭಿನಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net