

ನವದೆಹಲಿ: ಜಗತ್ತಿನೆಲ್ಲೆಡೆ ವಿಸ್ತರಿಸುತ್ತಲೇ ಇರುವ ಕೋವಿಡ್-19 ಸೋಂಕಿನ ವಿರುದ್ಧ ಬಹಳ ಜನ ನಾನಾ ಬಗೆಗಳಲ್ಲಿ ಹೋರಾಡುತ್ತಿದ್ದಾರೆ. ಇಂಗ್ಲೆಂಡ್ನ 73 ವರ್ಷದ ರಾಜಿಂದರ್ ಸಿಂಗ್ ಎನ್ನುವವರು ಬ್ರಿಟನ್ನ ನ್ಯಾಷನಲ್ ಹೆಲ್ತ್ ಸರ್ವೀಸ್ಗೆ 13 ಸಾವಿರ ಪೌಂಡ್ ಸಂಗ್ರಹಿಸಿ ಕೊಟ್ಟಿದ್ದಾರೆ.
ಇದಕ್ಕಾಗಿ ತಾವು ಸ್ಕಿಪ್ಪಿಂಗ್ ಮಾಡುವ ವಿಡಿಯೋವನ್ನು ಅವರು ಯುಟ್ಯೂಬ್ ಚಾನಲ್ನಲ್ಲಿ ಅಪ್ಲೋಡ್ ಮಾಡಿದ್ದರು. ಅದು ಎರಡೂವರೆ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ.
ಈ ಸಾಧನೆಗಾಗಿ ‘ಪಾಯಿಂಟ್ಸ್ ಆಫ್ ಲೈಟ್ಸ್’ ಎಂಬ ಪ್ರಶಸ್ತಿಯೂ ದೊರೆತಿದೆ. ‘ಸ್ಕಿಪ್ಪಿಂಗ್ ಸಿಖ್’ ಎಂದೇ ಪ್ರಸಿದ್ಧರಾಗಿರುವ ಇವರಿಗೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.