

ನವದೆಹಲಿ: ಹಿರಿಯ ವಕೀಲರು ಮತ್ತು ಶ್ರೇಷ್ಠ ನ್ಯಾಯಶಾಸ್ತ್ರಜ್ಞ ಸೊಲಿ ಸೊರಾಬ್ಜಿ (91) ಅವರು ಮಹಾಮಾರಿ ಕರೊನಾ ಸೋಂಕಿನಿಂದ ಶುಕ್ರವಾರ ಮೃತಪಟ್ಟಿದ್ದಾರೆ. ಸೊರಬ್ಜಿ ಅವರಿಗೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಸೊರಾಬ್ಜಿ ಅವರು 1930ರಲ್ಲಿ ಜನಿಸಿದರು. ಕಾನೂನು ಅಧ್ಯಯನ ಮಾಡಿದ್ದ ಸೊರಾಬ್ಜಿ ಅವರು 1953ರಲ್ಲಿ ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಸಿಕೊಂಡರು. 1971ರಲ್ಲಿ ಬಾಂಬೆ ಹೈಕೋರ್ಟ್ ಅವರನ್ನು ಹಿರಿಯ ವಕೀಲರಾಗಿ ನೇಮಿಸಿತ್ತು.
ಸೊರಾಬ್ಜಿ ಅವರು ಸುಮಾರು ಏಳು ದಶಕಗಳ ಕಾಲ ಕಾನೂನು ವೃತ್ತಿಯಲ್ಲಿದ್ದರು ಮತ್ತು ಎರಡು ಬಾರಿ ಭಾರತದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. 1989 ರಿಂದ 90ರವೆಗೆ ಮೊದಲ ಬಾರಿ ಮತ್ತು 1998 ರಿಂದ 2004ರವೆಗೆ ಎರಡನೇ ಬಾರಿ ಅಟಾರ್ನಿ ಜನರಲ್ ಆಗಿ ಕಾರ್ಯನಿರ್ವಹಿಸಿದ್ದಾರೆ. (ಏಜೆನ್ಸೀಸ್)