Raksha Bandhan; ಸಹೋದರ/ಸಹೋದರಿಯರಿಗೆ ವಿಶೇಷ ಮೆಸೇಜ್​​ ಕಳುಹಿಸಬೇಕಾ? ಇಲ್ಲಿದೆ ನೋಡಿ ಪ್ರೀತಿಯ ಸಂದೇಶ…

rakshabandhan
Published on

– ಶಮಿತಾ ಮುತ್ಲಾಜೆ

ಅಣ್ಣ- ತಂಗಿಯ ಬಾಂಧವ್ಯ ಪದಗಳಿಗೂ ಮೀರಿದ ಬಂಧ. ಸಹೋದರ- ಸಹೋದರಿಯ ಪ್ರೀತಿಯನ್ನು ಜಗತ್ತಿನ ಶ್ರೇಷ್ಠವಾದ ಸಂಬಂಧ ಅಂದ್ರು ತಪ್ಪಾಗಲಾರದು. ಈ ಬಂಧವನ್ನು ಬೆಸೆಯುವ ಹಬ್ಬ ಅಂದ್ರೆ ಅದು ರಕ್ಷಾ ಬಂಧನ. ಸಹೋದರಿ ಸಹೋದರನಿಗೆ ರಾಖಿಯನ್ನು ಕಟ್ಟುವ ಮೂಲಕ ತುಂಬ ಉತ್ಸಾಹದಿಂದ ಈ ಹಬ್ಬವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತದೆ.

ರಕ್ಷಾ ಬಂಧನದ ಮುಖ್ಯ ಉದ್ದೇಶವೇನೆಂದರೆ, ತಂಗಿ ಅಣ್ಣನಿಗೆ ಪವಿತ್ರ ದಾರವಾದ ರಾಖಿಯನ್ನು ಕಟ್ಟುವ ಮುಖಾಂತರ ಆತ ದೀರ್ಘಾಯುಷಿಯಾಗುವಂತೆ ಬಯಸುತ್ತಾಳೆ. ಅಂತಯೇ ಅಣ್ಣ ಆಕೆಗೆ ಜೀವನ ಪರ್ಯಂತ ರಕ್ಷಕನಾಗಿರುವೆ ಎಂಬ ಆಶ್ವಾಸನೆ ನೀಡುವ ಮೂಲಕ ಈ ಹಬ್ಬದ ಪ್ರಾಮುಖ್ಯತೆಯನ್ನು ಸಾರುತ್ತಾರೆ. ಈ ವರ್ಷದ ರಕ್ಷಾಬಂಧನವನ್ನು ಸಹೋದರ / ಸಹೋದರಿಗೆ ಪ್ರೀತಿಯ ಸಂದೇಶವನ್ನು ಕಳುಹಿಸುವ ಮೂಲಕ ವಿಶೇಷವಾಗಿ ಆಚರಿಸಿ....

1. ನನ್ನ ಜೀವನದ ಅಮೂಲ್ಯ ಉಡುಗೊರೆ ಎಂದರೆ ಅದು ನೀನು ಅಣ್ಣ. ನಿನ್ನ ಪ್ರೀತಿ ಮತ್ತು ಕಾಳಜಿಗೆ ಚಿರಋಣಿ ನಾನು. ರಕ್ಷಾಬಂಧನ ಹಬ್ಬದ ಶುಭಾಶಯಗಳು ನನ್ನ ಮುದ್ದು ಅಣ್ಣ.

3. ನನ್ನ ನಿನ್ನ ಬಂಧ ಯಾವತ್ತೂ ಮುಗಿದ ಸಂಬಂಧ. ಜೀವನದ ಪ್ರತಿ ಖುಷಿ ಹಾಗೂ ದುಃಖದಲ್ಲಿ ನಾನಿರುವೆ ಎಂದು ಮರೆಯದಿರು ತಂಗಿಯಮ್ಮ. ರಕ್ಷಾ ಬಂಧನ ಹಬ್ಬದ ಶುಭಾಶಯಗಳು ಪುಟಾಣಿ.

2. ನನ್ನ ನಿನ್ನ ಬಾಂಧವ್ಯ ಹೀಗೆ ಶಾಶ್ವತವಾಗಿರಲಿ. ನಿನ್ನೇಲ್ಲಾ ಕನಸು ನನಸಾಗಲಿ ಎಂದು ಆಶಿಸುತ್ತೇನೆ. ಹ್ಯಾಪಿ ರಕ್ಷಾ ಬಂಧನ್ ಬ್ರದರ್​.

5. ಅಪ್ಪನನ್ನು ಹೋಲುವ ನಿನ್ನ ಕಾಳಜಿ, ಅಮ್ಮನ್ನು ಹೋಲುವ ನಿಷ್ಕಲ್ಮಶ ಪ್ರೀತಿ. ಇವೆಲ್ಲವು ನಿನ್ನಲ್ಲಿ ಬಂಧಿಯಾಗುವಂತೆ ಮಾಡಿದೆ. ಹ್ಯಾಪಿ ರಕ್ಷಾ ಬಂಧನ್ ಮೈ ಡಿಯರ್ ಬ್ರದರ್.

4. ಮುರಿಯಲಾಗದ ಬಂಧ, ಹೇಳಲಾಗದ ಪ್ರೀತಿ ನಮ್ಮದು. ಹೀಗೆ ಬಾಳ ತೀರದವರೆಗೂ ಸಾಗುತಲಿರಲಿ ನಮ್ಮಿಬ್ಬರ ಪಯಣ. ಈ ರಕ್ಷಾ ಬಂಧನ ನಿನ್ನ ಬಾಳಲ್ಲಿ ಬೆಳಕು ತರಲಿ ಎಂದು ಹಾರೈಸುವ ನಿನ್ನ ಪ್ರೀತಿಯ ಅಣ್ಣ.

7. ನನಗಾಗಿ ಮಿಡಿಯುವ ಜೀವ ನೀನು. ನನ್ನ ಕೈ ಹಿಡಿದು ನಡೆಸುವ ಸಲಹೆಗಾರ ನೀನು. ನೀನು ನನ್ನವನು ಎನ್ನುವ ಸ್ವಾರ್ಥಿ ನಾನು. ನಿನ್ನ ಪ್ರೀತಿಯ ತಂಗಿ ಕೋರುವ ರಕ್ಷಾ ಬಂಧನದ ಶುಭಾಶಯಗಳು.

6. ಮೊದಲ ಹಾಗೂ ಶಾಶ್ವತ ಗೆಳೆಯನಾದ ನನ್ನ ಅಣ್ಣನಿಗೆ ರಕ್ಷಾಬಂಧನದ ಶುಭಾಶಯಗಳು.

ಇಂತಹ ಮುದ್ದಾದ ಸಂದೇಶಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸಿ. ಈ ವರ್ಷದ ರಕ್ಷಾ ಬಂಧನವನ್ನು ಸಂತೋಷದಿಂದ ಸಹೋದರ / ಸಹೋದರಿಯರೊಂದಿಗೆ ಸಲೆಬ್ರೆಟ್ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net