ಯೂಟ್ಯೂಬ್‌ನಲ್ಲಿ ಲಿಂಕ್ ಕಳುಹಿಸಿ ಧೋಖಾ

cyber crime
Published on

ಬೆಂಗಳೂರು: ಆರ್.ಟಿ.ನಗರದ 58 ವರ್ಷದ ವ್ಯಕ್ತಿಗೆ ಯೂಟ್ಯೂಬ್‌ನಲ್ಲಿ ಪರಿಚಯನಾದ ಅಪರಿಚಿತ ವ್ಯಕ್ತಿ, ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಂತೆ ಆಮಿಷವೊಡ್ಡಿ 31.55 ಲಕ್ಷ ರೂ. ವಂಚನೆ ಮಾಡಿದ್ದಾನೆ.

ಜು. 4ರಂದ ಸ್ನೇಹ ಬೆಳೆಸಿದ ಅಪರಿಚಿತ ವ್ಯಕ್ತಿ, ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ದೂರುದಾರ ವ್ಯಕ್ತಿಯನ್ನು ಸೇರಿಸಿಕೊಂಡು ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ಕೆಲವೊಂದು ಲಿಂಕ್‌ಗಳನ್ನು ಶೇರ್ ಮಾಡಿ ಇದರ ಮೇಲೆ ಕ್ಲಿಕ್ ಮಾಡಿ ಹಣ ಹೂಡಿಕೆ ಮಾಡಿದರೆ ಕೈತುಂಬ ಲಾಭ ಸಿಗಲಿದೆ ಎಂದು ಆಸೆ ಹುಟ್ಟಿಸಿದ್ದ.

ಇದನ್ನು ನಂಬಿದ ದೂರುದಾರ ವ್ಯಕ್ತಿ, ವಿವಿಧ ದಿನಾಂಕದಂದು 31.55 ಲಕ್ಷ ರೂ. ಹೂಡಿಕೆ ಮಾಡಿ ಮೋಸಕ್ಕೆ ಒಳಗಾಗಿದ್ದಾನೆ. ಈ ಬಗ್ಗೆ ಉತ್ತ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net