ನಾಳೆ ಮೀಸಲಾತಿ, ಅರಸು ವಿಚಾರಗೋಷ್ಠಿ

press meet
ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರೊ.ಎಚ್.ರಾಚಪ್ಪ ಮಾತನಾಡಿದರು. ತೀ.ನ.ಶ್ರೀನಿವಾಸ್, ಎಸ್.ಬಿ.ಶಿವಕುಮಾರ್, ಆರ್.ಟಿ.ನಟರಾಜ್ ಮುಂತಾದವರಿದ್ದರು.
Published on

ಶಿವಮೊಗ್ಗ: ಹಿಂದುಳಿದ ಜನಜಾಗೃತಿ ವೇದಿಕೆ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಆ.19ರ ಬೆಳಗ್ಗೆ 10.30ಕ್ಕೆ ಪ್ರೆಸ್ ಟ್ರಸ್ಟ್‌ನಲ್ಲಿ ಡಿ.ದೇವರಾಜ ಅರಸು ಜನ್ಮದಿನಾಚರಣೆ ಮತ್ತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಮೀಸಲಾತಿ ಹಾಗೂ ದೇವರಾಜ ಅರಸು ಕುರಿತಂತೆ ಎರಡು ಗೋಷ್ಠಿಗಳ ಮೂಲಕ ಸಂಪನ್ಮೂಲ ವ್ಯಕ್ತಿಗಳು ವಿವರಣೆ ನೀಡಲಿದ್ದಾರೆ ಎಂದು ಹಿಂದುಳಿದ ಜನಜಾಗೃತಿ ವೇದಿಕೆ ಗೌರವಾಧ್ಯಕ್ಷ ಪ್ರೊ.ಎಚ್.ರಾಚಪ್ಪ ತಿಳಿಸಿದರು.

ವಿಚಾರ ಸಂಕಿರಣವನ್ನು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಎಸ್.ರಾಮಪ್ಪ ಉದ್ಘಾಟಿಸಲಿದ್ದಾರೆ. ಹಿಂದುಳಿದ ಜಾತಿಗಳ ಒಕ್ಕೂಟದ ಗೌರವಾಧ್ಯಕ್ಷ ಪಿ.ಗಿರಿಯಪ್ಪ, ಹಿಂದುಳಿದ ಜನಜಾಗೃತಿ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಭಾಗವಹಿಸಲಿದ್ದಾರೆ. ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಪ್ರಾಧ್ಯಾಪಕಿ ಶುಭಾ ಮರವಂತೆ ಹಾಗೂ ದೇವರಾಜ ಅರಸು ಮತ್ತು ಹಿಂದುಳಿದವರ ಕಾಳಜಿ ಕುರಿತು ಸಾಹಿತಿ ಬಿ.ಚಂದ್ರೇಗೌಡ ವಿಷಯ ಹಂಚಿಕೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಿಂದುಳಿದ ಜನಜಾಗೃತಿ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್, ಪ್ರಮುಖರಾದ ಎಸ್.ಬಿ.ಅಶೋಕ್‌ಕುಮಾರ್, ಡಿ.ಬಿ.ಕೆಂಚಪ್ಪ, ಆರ್.ಟಿ. ನಟರಾಜ್, ಜನಮೇಜಿರಾವ್, ನಾಗರತ್ನಾ, ಸುಮಿತ್ರಾ, ಮನೋಹರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net