

ವಿಜಯಪುರ: ಅನಗತ್ಯವಾಗಿ ವಾದಕ್ಕಿಳಿದ ವ್ಯಕ್ತಿಯೊಬ್ಬನಿಗೆ ಬಟ್ಟೆ ಬಿಚ್ಚಿಸಿದ ಪೊಲೀಸರು ಜೀಪಿನಲ್ಲಿ ಕೂರುವ ಶಿಕ್ಷೆ ಕೊಟ್ಟ ಘಟನೆ ಶನಿವಾರ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ.
ರಕ್ಕಸಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಕಾರ್ಯದ ಭದ್ರತೆ ಪರಿಶೀಲನೆಗೆಂದು ಪಿಎಸೈ ಮಲ್ಲಪ್ಪ ಮಡ್ಡಿ ಹಾಗೂ ಪೇದೆಗಳು ತೆರಳಿದ್ದರು. ಈ ವೇಳೆ ಪರೀಕ್ಷಾ ಕೇಂದ್ರದ ಸುತ್ತಮುತ್ತ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಅಲ್ಲಿಂದ ತೆರಳುವಂತೆ ಸೂಚಿಸಿದರೂ ಕ್ಯಾರೆ ಎನ್ನದೆ ಸುಮ್ಮನಿದ್ದ. ಇದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಆತ, ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಇದನ್ನೂ ಓದಿರಿ ಕ್ವಾರಂಟೈನ್ನಲ್ಲಿರೋ ಸಚಿವರಿಗೆ ಕೋವಿಡ್ ಆಸ್ಪತ್ರೆಯಿಂದ ತಡರಾತ್ರಿ ಬಂತೊಂದು ಉಡುಗೊರೆ!
ಪರೀಕ್ಷಾ ಕೇಂದ್ರ ಬಳಿ ಓಡಾಡುತ್ತಿದ್ದ ವ್ಯಕ್ತಿ ಪೊಲೀಸರಿಗೆ ನಿಂದಿಸಿದ್ದಾನೆ ಎನ್ನಲಾಗಿದೆ. ಹಾಗಾಗಿ ಆತನನ್ನು ವಶಕ್ಕೆ ಪಡೆದ ಪೊಲೀಸರು ಜೀಪಿನಲ್ಲಿ ಬಟ್ಟೆ ಬಿಚ್ಚಿಸಿ ಕೂರಿಸಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.