ವಿವಿ ಕಾಲೇಜಿನ ಹಳೆ ವಿದ್ಯಾರ್ಥಿ ವಕೀಲ ಆರ್. ಲೋಹಿದಾಸ್, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಲಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಬಹಳ ಮುಖ್ಯ. ಅಂದಿನ ಸರ್ಕಾರಿ ಕಾಲೇಜಿನಲ್ಲಿ ಸಾಹಿತ್ಯ, ಸಂಗೀತ, ನಾಟಕ ಸೇರಿದಂತೆ ನಾನಾ ರೀತಿಯ ಸಂಘಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಟ್ಟವು. ಅಂದು ವಿದ್ಯಾರ್ಥಿಯಾಗಿದ್ದಾಗ ಸಿಕ್ಕ ಮನ್ನಣೆಯಿಂದಾಗಿ ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯಲು ಸಹಕಾರಿಯಾಯಿತು. ವಿದ್ಯಾರ್ಥಿಗಳು ಉರಿಯುವ ದೀಪವಾದರೆ, ಅದನ್ನು ಬೆಳಗಲು ಶಿಕ್ಷಕ ಎಂಬ ಶಕ್ತಿಯ ಅಗತ್ಯವಿದೆ ಎಂದರು.