

ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗುಡ್ಡದ ಪಕ್ಕದಲ್ಲಿರುವ ಆಕ್ಸರ್ಡ್ ಸಮೂಹ ಶಿಣ ಸಂಸ್ಥೆಯಲ್ಲಿ 5, 6, 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಆಕ್ಸರ್ಡ್ ಪಾಟೀಲ್ಸ್ ಜ್ಯೂನಿಯರ್ ಜೀನಿಯಸ್ ಆವಾರ್ಡ್&2025 ಸ್ಕಾಲರ್ಶಿಪ್ ಸ್ಪರ್ಧಾ ಪರೀೆಯಲ್ಲಿ ಒಂದನೇ ರ್ಯಾಂಕ್ ಪಡೆದ ಮೂರೂ ತರಗತಿಗಳ ತಲಾ ಒಬ್ಬರಿಗೆ ಟ್ರೋಫಿ ವಿತರಿಸಿ ಪುರಸ್ಕರಿಸಲಾಗಿದ್ದು, ಒಟ್ಟು 30 ವಿದ್ಯಾರ್ಥಿಗಳನ್ನು ಉಚಿತ ಶಿಣಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತ್ಗೌಡ ಪಾಟೀಲ, ನಿರ್ದೇಶಕ ದರ್ಶನಗೌಡ ಪಾಟೀಲ, ಮುಖ್ಯಾಧ್ಯಾಪಕ ಇಸ್ಮಾಯಿಲ್ ಮನಿಯಾರ ತಿಳಿಸಿದ್ದಾರೆ.
ಈ ಕುರಿತು "ವಿಜಯವಾಣಿ'ಯೊಂದಿಗೆ ಮಾತನಾಡಿದ ಅವರು, 1&5 ರ್ಯಾಂಕ್ ಪಡೆದ 5ನೇ ತರಗತಿಯ 7 ವಿದ್ಯಾರ್ಥಿಗಳಿಗೆ 6&7ನೇ ತರಗತಿವರೆಗೆ, 7ನೇ ತರಗತಿಯ 8 ವಿದ್ಯಾರ್ಥಿಗಳಿಗೆ 8&10ನೇ ತರಗತಿವರೆಗೆ ಊಟ, ವಸತಿ ಸಹಿತ ಉಚಿತ ಶಿಣ, 6, 7ನೇ ರ್ಯಾಂಕ್ ಪಡೆದ 5ನೇ ತರಗತಿಯ 5 ವಿದ್ಯಾರ್ಥಿಗಳಿಗೆ 6&7ನೇ ತರಗತಿವರೆಗೆ, 1&5 ರ್ಯಾಂಕ್ ಪಡೆದ 6ನೇ ತರಗತಿಯ 5 ವಿದ್ಯಾರ್ಥಿಗಳಿಗೆ 7ನೇ ತರಗತಿವರೆಗೆ, 6ನೇ ರ್ಯಾಂಕ್ ಪಡೆದ 7ನೇ ತರಗತಿಯ 5 ವಿದ್ಯಾರ್ಥಿಗಳಿಗೆ 8&10ನೇ ತರಗತಿವರೆಗೆ ಉಚಿತ ಶಿಣ ನೀಡಲು ತೀರ್ಮಾನಿಸಲಾಗಿದೆ. ಭಾನುವಾರ ನಡೆದ ಪರೀೆಯಲ್ಲಿ ವಿಜಯಪುರ ಸೇರಿ ಅಕ್ಕಪಕ್ಕದ ಜಿಲ್ಲೆಗಳ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಏಪ್ರಿಲ್ 4 ರಂದು ಎಸ್ಸೆಸ್ಸೆಲ್ಸಿ ಪರೀೆ ಮುಕ್ತಾಯಗೊಳ್ಳಲಿದ್ದು ಏ.5ರಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಕ್ಸರ್ಡ್ ಜೀನಿಯಸ್ ಆವಾರ್ಡ&2025 ಪರೀೆ ಆಯೋಜಿಸಲು ಸಂಸ್ಥೆಯ ಅಧ್ಯರಾದ ಎಂ.ಎಸ್. ಪಾಟೀಲ ಅವರು ತೀರ್ಮಾನಿಸಿದ್ದಾರೆ ಎಂದರು.