

ಹುಣಸೂರು: ಮೈಸೂರಿನಲ್ಲಿ ಇತ್ತೀಚೆಗೆ ಆಯೋಜನೆಗೊಂಡಿದ್ದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಟ್ಯಾಲೆಂಟ್ ಪಿಯು ಕಾಲೇಜಿನ ಕ್ರೀಡಾಪಟುಗಳು ಅಥ್ಲೆಟಿಕ್ಸ್‌ನ ವಿವಿಧ ಕ್ರೀಡೆಗಳಲ್ಲಿ ವಿಜಯಶಾಲಿಗಳಾಗುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿ ಎಲ್.ಹೇಮಾ 400 ಮೀಟರ್ ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಮತ್ತು 100 ಮೀಟರ್ ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಜಿ.ಶರತ್ ಕುಮಾ ಡಿಸ್ಕಸ್ ಥ್ರೋನಲ್ಲಿ ಪ್ರಥಮ ಸ್ಥಾನ ಹಾಗೂ ಜಾವೆಲಿನ್ ಥ್ರೋದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ರಾಹುಲ್ ಥ್ರೋ ಬಾಲ್‌ನಲ್ಲಿ, ಯಶ್ವಿನ್ ಮತ್ತು ಯುವರಾಜ್ ವಾಲಿಬಾಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕಾಲೇಜಿನ ಕ್ರೀಡಾಪಟುಗಳ ಸಾಧನೆಯನ್ನು ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ನವೀನ್ ರೈ, ಕೃಷ್ಣಮೂರ್ತಿ, ನಿರ್ದೇಶಕರಾದ ಡಾ.ಶ್ರೀ ನಾಥ್ ಆರ್.ಎನ್.ಮಂಜುನಾಥ್, ಪ್ರಾಂಶುಪಾಲ ಎಂ.ಟಿ.ಮಂಜುನಾಥ್ ಅಭಿನಂದಿಸಿದ್ದಾರೆ.