ಸ್ವಾತಂತ್ರೃ ದಿನಾಚರಣೆಯಲ್ಲಿ ಸೀಮಂತ

16kls1
ಕಳಸದ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯಿಂದ ಸದಸ್ಯೆ ಸುಚಿತಾಗೆ ಸೀಮಂತ ಮಾಡಲಾಯಿತು. ಸುಜಯ ಸದಾನಂದ, ಚಂಪಾ ಎಂ ರಾವ್, ಅಮಿತಾ ವಿನಾಯಕ, ಉಪಾಧ್ಯಕ್ಷೆ ಉಷಾ ಕುಮಾರ್ ಇದ್ದರು.
Published on

ಕಳಸ: ಕಳಸದ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯಲ್ಲಿ ಆಯೋಜಿಸಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ಮಂಡಳಿ ಸದಸ್ಯೆ ಸುಚಿತಾ ಅವರಿಗೆ ಮಂಡಳಿ ಸದಸ್ಯರು ಸೀಮಂತ ಶಾಸ್ತ್ರ ಮಾಡಿದರು.
ಗರ್ಭಿಣಿ ಸುಚಿತಾಗೆ ಮಂಡಳಿ ಎಲ್ಲ ಮುತ್ತೈದೆಯರು ಸೇರಿ ಹಸಿರು ಬಳೆ ತೊಡಿಸಿ, ಹೂ, ಹಣ್ಣು, ಸೀರೆ ಕೊಟ್ಟು ಮಡಿಲು ತುಂಬಿಸಿ ಹಾರೈಸಿದರು. ಕಳಸ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಉಷಾ ಹಾಗೂ ಮಿಲಿಟರಿಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸುತ್ತ ಕಳಸ ಮೆಸ್ಕಾಂ ಇಲಾಖೆಯಲ್ಲಿರುವ ಬಸವಣಿ ಹಾಗೂ ದ್ವಿತೀಯ ಪಿಯು, ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬೆಳಗ್ಗೆ ಮಂಡಳಿ ಕಚೇರಿ ಎದುರು ಮಂಡಳಿ ಅಧ್ಯಕ್ಷೆ ಸುಜಯ ಸದಾನಂದ ಧ್ವಜಾರೋಹಣ ಮಾಡಿ ಸಿಹಿ ಹಂಚಿದರು. ಮಂಡಳಿ ಸ್ಥಾಪಕ ಅಧ್ಯಕ್ಷೆ ಚಂಪಾ ಎಂ ರಾವ್, ಕಾರ್ಯದರ್ಶಿ ಅಮಿತಾ ವಿನಾಯಕ, ಉಪಾಧ್ಯಕ್ಷೆ ಉಷಾ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net