

ನವದೆಹಲಿ: ಪಾಕಿಸ್ತಾನಿ ಪ್ರಜೆಯಾಗಿರುವ ಸೀಮಾ ಹೈದರ್, ಸೋಶಿಯಲ್ ಮೀಡಿಯಾದಲ್ಲಿ ಭೇಟಿಯಾದ ತನ್ನ ಭಾರತೀಯ ಗೆಳೆಯನೊಂದಿಗೆ ಇರಲು ಗಡಿ ದಾಟಿದಾಗ ತನ್ನ ಅಸಾಮಾನ್ಯ ಪ್ರೇಮಕಥೆಗೆ ಗಮನ ಸೆಳೆದಳು. ಆದರೆ ಗಡಿ ದಾಟಿ ಬಂದ ಈ ಮಹಿಳೆಗೆ ಇದೀಗ ಪಾಕ್ ಪತಿಯಿಂದ ನೋಟಿಸ್ ಬಂದಿದೆ. ಪಾಕಿಸ್ತಾನದ ಸಿಂಧ್‌ನ 30 ವರ್ಷದ ಸೀಮಾ ಹೈದರ್, 2019 ರಲ್ಲಿ PUBG ಮೂಲಕವಾಗಿ ಗ್ರೇಟರ್ ನೋಯ್ಡಾದಲ್ಲಿ ತನ್ನ ಪಾಲುದಾರ ಸಚಿನ್ ಮೀನಾ ಪರಿಚಯವಾಗಿತ್ತು. ನಂತರ ಸ್ನೇಹ ಪ್ರೀತಿಯಾಗಿ ಪ್ರಿಯಕರನನ್ನು ಸೇರಲು ಮೇ ತಿಂಗಳಲ್ಲಿ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದರು. ಸೌದಿ ಅರೇಬಿಯಾದಲ್ಲಿ ಗುಲಾಮ್ ಹೈದರ್ ಅವರನ್ನು ವಿವಾಹವಾಗಿ ಇದ್ದ ಸೀಮಾ ತನ್ನ ನಾಲ್ಕು ಮಕ್ಕಳನ್ನು ಕರೆದುಕೊಂಡು ಅಕ್ರಮವಾಗಿ ಭಾರತ ಪ್ರವೇಶ ಮಾಡಿದಳು. ಸೀಮಾ ಪ್ರವಾಸಿ ವೀಸಾದಲ್ಲಿ ಕರಾಚಿಯಿಂದ ದುಬೈ ಮೂಲಕ ನೇಪಾಳವನ್ನು ಪ್ರವೇಶಿಸಿದರು, ನಂತರ ರೂಪಾಂದೇಹಿ-ಖುನ್ವಾ ಗಡಿಯ ಮೂಲಕ ಭಾರತಕ್ಕೆ ದಾಟಿದರು, ಸಚಿನ್‌ನೊಂದಿಗೆ ಉಳಿಯಲು ಲಕ್ನೋ ಮತ್ತು ಆಗ್ರಾ ಮೂಲಕ ಗ್ರೇಟರ್ ನೋಯ್ಡಾಕ್ಕೆ ಪ್ರಯಾಣಿಸಿ ಇಲ್ಲಿ ಪ್ರಿಯಕರನ ಜತೆ ತನ್ನ ಮಕ್ಕಳೊಂದಿಗೆ ವಾಸವಾಗಿದ್ದಾಳೆ.
ಸೀಮಾ ಹೈದರ್ ಅವರ ಮಾಜಿ ಪತಿ ಗುಲಾಮ್ ಹೈದರ್ ಅವರು ಸೀಮಾ ಮತ್ತು ಅವರ ಪತಿ ಸಚಿನ್ ಮೀನಾಗೆ ತಲಾ 3 ಕೋಟಿ ರೂಪಾಯಿ ನೋಟಿಸ್ ಕಳುಹಿಸಿದ್ದಾರೆ. ತನ್ನ ಮಕ್ಕಳನ್ನು ಮರಳಿ ಕರೆತರಲು ಭಾರತೀಯ ವಕೀಲರನ್ನು ನೇಮಿಸಿದ ಗುಲಾಮ್ ಹೈದರ್, ಸೀಮಾ ಹೈದರ್ ಪರ ವಕೀಲ ಡಾ.ಎಪಿ ಸಿಂಗ್ಗೂ 5 ಕೋಟಿ ರೂ. ನೋಟಿಸ್ ಕಳುಹಿಸಿದ್ದಾರೆ.
ಗುಲಾಮ್ ಹೈದರ್ ಇತ್ತೀಚೆಗೆ ತನ್ನ ಮಕ್ಕಳನ್ನು ಮರಳಿ ಪಡೆಯಲು ಭಾರತೀಯ ವಕೀಲರನ್ನು ನೇಮಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಗುಲಾಮ್ ಹೈದರ್ ಸೀಮಾ ಪರ ವಕೀಲ ಎಪಿ ಸಿಂಗ್ ಅವರಿಗೂ 5 ಕೋಟಿ ರೂಪಾಯಿ ನೋಟಿಸ್ ಕಳುಹಿಸಿದ್ದಾರೆ. ಗುಲಾಮ್ ಹೈದರ್ ಪರ ವಕೀಲ ಅಲಿ ಮೊಮಿನ್ ಅವರು ಸೀಮಾ ಮತ್ತು ಸಚಿನ್ ಕ್ಷಮೆಯಾಚಿಸಿ ಒಂದು ತಿಂಗಳೊಳಗೆ ದಂಡವನ್ನು ಠೇವಣಿ ಮಾಡುವಂತೆ ಹೇಳಿದ್ದಾರೆ, ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಪಾಕಿಸ್ತಾನದ ಉನ್ನತ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಅನ್ಸಾರ್ ಬರ್ನಿ ಅವರನ್ನು ಗುಲಾಮ್ ಹೈದರ್ ತನ್ನ ನಾಲ್ಕು ಮಕ್ಕಳ ಪಾಲನೆ ಪಡೆಯಲು ಸಹಾಯಕ್ಕಾಗಿ ಸಂಪರ್ಕಿಸಿದ್ದಾರೆ