ರಾಮ ಭಕ್ತಿಯಲ್ಲಿ ಮುಳುಗಿದ ಪಾಕ್​​ ಮಹಿಳೆ!; ರಾಮಕೀರ್ತನೆ, ಹನುಮಾನ್ ಚಾಲೀಸಾ ಪಠಿಸಿದ ಸೀಮಾ ಹೈದರ್

seema haider singh ram bhajan hanuman chalisa greater noida
Published on

ನವದೆಹಲಿ:   ಕೆಲವು ತಿಂಗಳ ಹಿಂದೆ ಸೀಮಾ ಹೈದರ್ ಎಂಬ ಮಹಿಳೆ PUBG ಯಲ್ಲಿ ಪರಿಚಯವಾದ ಯುವಕನಿಗಾಗಿ ಪಾಕಿಸ್ತಾನದಿಂದ ತನ್ನ ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದು ಆ ಸಮಯದಲ್ಲಿ ಸುದ್ದಿಯಲ್ಲಿ ಹಾಟ್ ಟಾಪಿಕ್ ಆಗಿತ್ತು. ಇದೀಗ ರಾಮನ ಮೇಲಿನ ಭಕ್ತಿಯನ್ನು ಹಾಡಿನ ಮೂಲಕವಾಗಿ ವ್ಯಕ್ತಪಡಿಸಿದ್ದಾರೆ.

ಸೀಮಾ ಹೈದರ್, ಪ್ರಸ್ತುತ ಗ್ರೇಟರ್ ನೋಯ್ಡಾದ ರಬುಪುರದಲ್ಲಿ ತನ್ನ ಪ್ರೇಮಿ ಸಚಿನ್ ಮೀನಾ ಜೊತೆ ವಾಸಿಸುತ್ತಿದ್ದಾರೆ. ಸೀಮಾ ಎಂಬ ಮುಸ್ಲಿಂ ಮಹಿಳೆ ಹಿಂದೂ ದೇವರನ್ನು ಪೂಜಿಸುತ್ತಾಳೆ. ಸೀಮಾ ತನ್ನ ಮಗನೊಂದಿಗೆ ಹನುಮಾನ್ ಚಾಲೀಸಾವನ್ನು ಪಠಿಸಿದ್ದು ನೆಟ್‌ನಲ್ಲಿ ವೈರಲ್ ಆಗಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ಸಚಿನ್-ಸೀಮಾ ವಾಸಿಸುವ ರಬೂಪುರದಲ್ಲಿ ಇತ್ತೀಚೆಗೆ ರಾಮ ಭಜನೆ ನಡೆಯಿತು. ರಾಮಕೀರ್ತನೆ ಹಾಗೂ ಹನುಮಾನ್ ಭಕ್ತಿಗೀತೆಗಳನ್ನು ಹಾಡಲಾಯಿತು. ಈ ಸಂದರ್ಭದಲ್ಲಿ ಸೀಮಾ ಅವರು ಸ್ವಾತಿ ಮಿಶ್ರಾ ಹಾಡಿರುವ ‘ರಾಮ್ ಆಯೇಂಗೆ’ ಹಾಡನ್ನು ಹಾಡಿದರು. ತಲೆಯ ಮೇಲೆ ಕುಂಕುಮವನ್ನು ಧರಿಸಿ ರಾಮಭಕ್ತಿ ಗೀತೆಯನ್ನು ಸೊಗಸಾಗಿ ಹಾಡಿದರು. ಅವರ ಮಗ ಕೂಡ ಅವರೊಂದಿಗೆ ಹನುಮಾನ್ ಚಾಲೀಸಾವನ್ನು ಪಠಿಸಿದರು. ಈ ವಿಡಿಯೋವನ್ನು ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಅನುಮತಿ ದೊರೆತ ಬಳಿಕ ಕುಟುಂಬ ಸಮೇತ ಅಯೋಧ್ಯೆಯ ರಾಮಮಂದಿರಕ್ಕೆ ರಾಮದರ್ಶನಕ್ಕೆ ತೆರಳುವುದಾಗಿ ಸೀಮಾ ಈ ಸಂದರ್ಭದಲ್ಲಿ ತಿಳಿಸಿದರು. ಅವರು ಇಲ್ಲಿ ತುಂಬಾ ಸಂತೋಷವಾಗಿದ್ದಾರೆ. ಭಾರತವು ಮಹಿಳೆಯರನ್ನು ಗೌರವಿಸುವ ದೇಶವಾಗಿದೆ ಎಂದು ಹೇಳಿದರು. ತಾನು ಸಂಪೂರ್ಣವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಮತ್ತು ಶ್ರೀಕೃಷ್ಣ ಮತ್ತು ರಾಮನ ಭಕ್ತೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net