ಮುಚ್ಚಿದ ಕೋಣೆಯಲ್ಲಿ ಪ್ರಿಯಕರನ ಜತೆ ಮಗಳನ್ನು ನೋಡಿದ ತಂದೆ: ಮುಂದೆ ನಡೆದದ್ದು ದುರಂತ..

close door
ಸಾಂದರ್ಭಿಕ ಚಿತ್ರ
Published on

ಗೊಂಡಾ: ಮನೆಯ ಕೊನೆಯೊಂದರಲ್ಲಿ ಮಗಳು ಹಾಗೂ ಪ್ರಿಯಕರ ಕಂಡ ತಂದೆಯೊಬ್ಬ ಇಬ್ಬರನ್ನು ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಗೊಂಡಾ ಬಳಿ ನಡೆದಿದೆ.

ಧನ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಸಂಚಲನ ಮೂಡಿಸುವ ಈ ಘಟನೆಯೊಂದು ನಡೆದಿದ್ದು, ಮೆಹನೌನ್ ಗ್ರಾಮದಲ್ಲಿ ವಾಸವಾಗಿರುವ ಸತೀಶ್ ಎಂಬ ಯುವಕ ಗ್ರಾಮದ ನಿವಾಸಿ ತನ್ನ ಸಂಬಂಧಿ ಹುಡುಗಿಯನ್ನು ಪ್ರೀತಿಸುತ್ತಿದ್ದು, ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಭಾನುವಾರ ಮಧ್ಯರಾತ್ರಿ ಕೂಡ ಯುವಕ ತನ್ನ ಮನೆಯಿಂದ ಹೊರಬಂದು ತನ್ನ ಗೆಳತಿಯನ್ನು ಭೇಟಿಯಾಗಲು ಹುಡುಗಿಯ ಮನೆಗೆ ಯಾರಿಗೂ ತಿಳಿಯದಂತೆ ಬಂದಿದ್ದಾನೆ.

ಮನೆಯಲ್ಲಿ ರಾತ್ರಿ ಮುಚ್ಚಿದ ಕೋಣೆಯಲ್ಲಿ ಹುಡುಗಿ ಮತ್ತು ಹುಡುಗನ ಶಬ್ದವನನು ಕೇಳಿದ ತಂದೆ ಮತ್ತು ಮಗ ತಾಳ್ಮೆ ಕಳೆದುಕೊಂಡಿದ್ದು, ಆತನ ಹೊರಬರುವಿಕೆಗಾಗಿ ಕಾಯುತ್ತಿದ್ದರು. ಆತ ಹೊರ ಬರುತ್ತಿದ್ದಂತೆ ದಾಳಿ ನಡೆಸಿದ ತಂದೆ-ಮಗ ಪ್ರಿಯಕರ ಮತ್ತು ಪ್ರಿಯತಮೆಯ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದಾರೆ. ಆ ಬಳಿಕ ಯುವಕನನ್ನು ಚಾಪೆಯಲ್ಲಿ ಸುತ್ತಿಕೊಂಡು ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಪ್ರಿಯಕರನ ಶವವನ್ನು ಎಸೆದಿದ್ದಾರೆ.

ಇನ್ನು ಯುವತಿಯನ್ನು ಅಯೋಧ್ಯೆಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದರು. ಸದ್ಯ ಕಸ್ಟ್​ಡಿಯಲ್ಲಿರುವ ತಂದೆ-ಮಗನನ್ನು ವಿಚಾರಣೆ ನಡೆಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇತರೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net