Naga Chaitanya-Sobhita ಮದುವೆಗೆ ಆಗಮಿಸುತ್ತಿರುವ ಸೆಲೆಬ್ರಿಟಿಗಳು ಇವರೇ ನೋಡಿ

Naga Chaitanya & sobhita Dhulipala (2)
Published on

Naga Chaitanya-Sobhita: ಟಾಲಿವುಡ್ ನಟ ನಾಗ ಚೈತನ್ಯ-ಶೋಭಿತಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಅವರ ವಿವಾಹ ಸಮಾರಂಭಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. 300 ಸೆಲೆಬ್ರಿಟಿಗಳಿಗೆ ಆಹ್ವಾನ ಬಂದಿದೆಯಂತೆ.

ಬುಧವಾರ (ಡಿಸೆಂಬರ್ 4)  ನಾಗ ಚೈತನ್ಯ ಶೋಭಿತಾ ಕೊರಳಿಗೆ ಮೂರು ಗಂಟು ಹಾಕಲಿದ್ದಾರೆ.  ಕುಟುಂಬಸ್ಥರು, ಬಂಧುಗಳು, ಆಪ್ತರು, ಚಿತ್ರರಂಗದ ಗಣ್ಯರು ಸೇರಿದಂತೆ 300 ಮಂದಿಗೆ ಆಹ್ವಾನ ನೀಡಲಾಗಿದೆ.

ವಿವಾಹ ಪೂರ್ವದ ಸಂಭ್ರಮಾಚರಣೆಯ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿ ವಿವಾಹ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು.

ಅಕ್ಕಿನೇನಿ ಮತ್ತು ಧೂಳಿಪಳ್ಳ ಕುಟುಂಬ ಕೂಡ ಈ ಮದುವೆಗೆ ಆಗಮಿಸಲಿದ್ದಾರೆ. ಚಿತ್ರರಂಗದ ಖ್ಯಾತ ನಿರ್ದೇಶಕರಾದ ರಾಜಮೌಳಿ ಮತ್ತು ಸುಕುಮಾರ್ ಉಪಸ್ಥಿತರಿರುತ್ತಾರೆ. ಮತ್ತು ಈ ಮದುವೆಗೆ ನಾಯಕರಾದ ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಬರಲಿದ್ದಾರೆ ಎನ್ನಲಾಗಿದೆ.  300 ಸೆಲೆಬ್ರಿಟಿಗಳಿಗೆ ಆಹ್ವಾನ ಬಂದಿದೆಯಂತೆ.

ನಾಗ ಚೈತನ್ಯ ಸೋಭಿತಾ ಅವರನ್ನು ಮೊದಲ ಬಾರಿಗೆ OTT ಶೋನಲ್ಲಿ ಭೇಟಿಯಾದರು. ಕೆಲವೇ ತಿಂಗಳಲ್ಲಿ ಅವರ ಪರಿಚಯ ಪ್ರೀತಿಗೆ ತಿರುಗಿತ್ತು. ಬಳಿಕ ಎರಡೂ ಮನೆಯವರಿಗೆ ಮನವರಿಕೆ ಮಾಡಿ ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಲು ನಿರ್ಧರಿಸಿದ್ದಾರೆ. ಈ ವರ್ಷದ ಆಗಸ್ಟ್ 8 ರಂದು ಅವರ ನಿಶ್ಚಿತಾರ್ಥವು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಿತು.  ಈಗ ಪ್ರೇಮ ಪಕ್ಷಿಗಳು ಮದುವೆ ಆಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net