

ಬರೇಲಿ : ಮಾಸ್ಕ್ ಹಾಕದ ಬಗ್ಗೆ ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್, ಗ್ರಾಹಕನ ಮೇಲೆ ಗುಂಡು ಹಾರಿಸಿರುವ ಆಘಾತಕಾರಿ ಪ್ರಸಂಗ ನಡೆದಿದೆ. ಉತ್ತರಪ್ರದೇಶದ ಬರೇಲಿಯ ಬ್ಯಾಂಕ್ ಆಫ್ ಬರೋಡಾದ ಜಂಕ್ಷನ್ ರೋಡ್ ಶಾಖೆಯಲ್ಲಿ ಈ ದುರ್ಘಟನೆ ನಡೆದಿದೆ.
ರೈಲ್ವೇ ಇಲಾಖೆ ನೌಕರ ರಾಜೇಶ್ ಎಂಬುವರ ಕಾಲಿಗೆ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ಕೇಶವಕುಮಾರ್ ಎಂಬುವರು ಗುಂಡು ಹಾರಿಸಿದ್ದಾರೆ. ಈರ್ವರ ನಡುವೆ ಮಾಸ್ಕ್ ಧರಿಸದ ಬಗ್ಗೆ ವಾದವಿವಾದ ನಡೆದಿತ್ತು ಎನ್ನಲಾಗಿದೆ.
ಬರೇಲಿಯ ಕೊತ್ವಾಲಿ ಠಾಣೆಯ ಪೊಲೀಸರು ಗಾರ್ಡ್ ಕೇಶವ್ಕುಮಾರ್ನನ್ನು ಬಂಧಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಗುಂಡು ಬಿದ್ದು ರಕ್ತ ಕಳೆದುಕೊಳ್ಳುತ್ತಿದ್ದ ರಾಜೇಶ್ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. (ಏಜೆನ್ಸೀಸ್)