ಕೇಂದ್ರ ಆರೋಗ್ಯ ಸಚಿವರ ಒಎಸ್​ಡಿ ಕಚೇರಿಗೂ ತಲುಪಿತು COVID19: ಸೆಕ್ಯುರಿಟಿ ಗಾರ್ಡ್​ಗೆ ಪಾಸಿಟಿವ್​

aiims 27 APR 20
Published on

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಅವರ ಒಎಸ್​ಡಿ ಕಚೇರಿಯಲ್ಲಿ ಸೇವೆ ನಿಯೋಜಿಸಲ್ಪಟ್ಟಿದ್ದ ಸೆಕ್ಯುರಿಟಿ ಗಾರ್ಡ್​ ಮತ್ತು ಡಾ.ಬಿ.ಆರ್​. ಅಂಬೇಡ್ಕರ್ ಇನ್​​ಸ್ಟಿಟ್ಯೂಟ್​ ರೋಟರಿ ಕ್ಯಾನ್ಸರ್​ ಹಾಸ್ಪಿಟಲ್​ನ ನರ್ಸ್​ ಒಬ್ಬರಿಗೆ COVID19 ಪಾಸಿಟಿವ್​ ಪತ್ತೆಯಾಗಿದೆ.

ಸಚಿವರ ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ(ಒಎಸ್​ಡಿ) ಅವರ ಕಚೇರಿ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸಸ್​ನ ಟೀಚಿಂಗ್ ಬ್ಲಾಕ್​ನಲ್ಲಿ ಇದ್ದು, ಶನಿವಾರ ಸೆಕ್ಯುರಿಟಿ ಸಿಬ್ಬಂದಿಯ ಟೆಸ್ಟ್ ಪಾಸಿಟಿವ್​ ದೃಢವಾಗಿತ್ತು. ಕೂಡಲೇ ಕಚೇರಿ ಆವರಣವನ್ನು ಶುಚಿಗೊಳಿಸಿ, ಅಲ್ಲಿದ್ದ ಎಲ್ಲ ಸಿಬ್ಬಂದಿಗೂ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಲಾಗಿದೆ. ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ರೀತಿ ಕ್ಯಾನ್ಸರ್​ ಸೆಂಟರ್​ನಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ನರ್ಸ್​ ಒಬ್ಬರ ಇಬ್ಬರು ಮಕ್ಕಳಿಗೂ ಸೋಂಕು ತಗುಲಿದೆ. ಏಮ್ಸ್​ನ ವಿವಿಧ ಡಿಪಾರ್ಟ್​ಮೆಂಟ್​ಗಳ 70ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು ಎಲ್ಲರನ್ನೂ ಸೆಲ್ಫ್ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net