ಗಾಯಕ ಮೂಸೆವಾಲ ಹತ್ಯೆ ಬೆನ್ನಲ್ಲೇ ಎಚ್ಚೆತ್ತ ಪಂಜಾಬ್​ ಸರ್ಕಾರ: ಮತ್ತೆ 400 ಮಂದಿಗೆ ಭದ್ರತೆ

Moosewala
Published on

ಚಂಡಿಗಢ: ಖ್ಯಾತ ಗಾಯಕನ ಹತ್ಯೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಂಜಾಬ್​ ಸರ್ಕಾರ ರದ್ದುಪಡಿಸಿದ್ದ ಭದ್ರತೆಯನ್ನು ವಾಪಸ್​ ನೀಡಿದೆ.

ಗಾಯಕ ಸಿಧು ಮೂಸೆವಾಲ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್​ ಪಡೆದುಕೊಂಡಿದ್ದ ಒಂದು ದಿನದ ಬಳಿಕವೇ ಅವರ ಹತ್ಯೆಯಾಗಿತ್ತು. ಇದರಿಂದ ಆಪ್​ ಸರ್ಕಾರದ ವಿರುದ್ಧ ಆರೋಪ ಕೇಳಿಬಂದಿತ್ತು.

ರಾಜಕೀಯ ದುರುದ್ದೇಶದಿಂದ ಭದ್ರತೆಯನ್ನು ಅವಲೋಕಿಸದೇ ವಾಪಸ್​ ಪಡೆದಿದ್ದಕ್ಕೆ ಸಿಧು ಅವರ ಹತ್ಯೆಯಾಗಿದೆ ಎಂದು ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ 400 ಮಂದಿಯಿಂದ ವಾಪಸ್​​ ಪಡೆದಿದ್ದ ಭದ್ರತೆಯನ್ನು ಮತ್ತೆ ನೀಡುವುದಾಗಿ ತಿಳಿಸಿದೆ.

ಜೂನ್​ 7 ರಿಂದ ಮತ್ತೆ 420 ಮಂದಿಗೆ ಭದ್ರತೆಯನ್ನು ವಾಪಸ್​ ನೀಡಲಿದ್ದೇವೆ ಎಂದು ಪಂಜಾಬ್​ ಸರ್ಕಾರ ಹೇಳಿಕೊಂಡಿದೆ.  ವಿವಿಐಪಿಗಳಿಗೆ ಭದ್ರತೆಯನ್ನು ಮತ್ತೆ ನೀಡಲಾಗುವುದು  ಎಂದು ಪಂಜಾಬ್ ಸರ್ಕಾರ ಇಂದು ಹೇಳಿದೆ, ಗಾಯಕ ಸಿಧು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಐದು ದಿನಗಳ ನಂತರ - ಅವರ ಭದ್ರತೆಯನ್ನು ಮೊಟಕುಗೊಳಿಸಲಾಯಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net