

ನವದೆಹಲಿ: ಇಂದು ಕಲಾಪ ನಡೆಯುತ್ತಿದ್ದ ವೇಳೆ ಸಂಸತ್ ಒಳಗೆ ಹಾಗೂ ಸಂಸತ್ ಹೊರಗೆ ನಾಲ್ವರು ದಾಳಿ ಆತಂಕ ಸೃಷ್ಟಿ ಮಾಡಿದ್ದಾರೆ. ಈ ಘಟನೆ ಮುನ್ನೆಲೆ ಬರುತ್ತಿದ್ದಂತೆ ಇನ್ಮುಂದೆ ಸಂಸತ್ ಭವನಕ್ಕೆ ವೀಕ್ಷಕರ ಪಾಸ್ ಸಿಗಲ್ಲ ಎನ್ನಾಗಿದೆ.
ಇಂದು ಸಂಸತ್ ಕಲಾಪ ನಡೆಯುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಒಳನುಗ್ಗಿ ಗ್ಯಾಸ್ ಹೊರಸೂಸುವ ವಸ್ತುವೊಂದನ್ನು ಎಸೆದ ಘಟನೆ ನಡೆದಿದೆ. ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದರು. ಅವರು ಅನಿಲ ಹೊರಸೂಸುವಂಥಾ ಏನೋ ವಸ್ತು ಎಸೆದು ತುಂಬಿದ ಸಭೆಯಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ.
ಲೋಕಸಭಾ ಕಲಾಪದ ವೇಳೆ ಭಾರಿ ಭದ್ರತಾ ಲೋಪ ಉಂಟಾಗಿರುವ ಹಿನ್ನೆಲೆಯಲ್ಲಿ ವೀಕ್ಷಕರ ಪಾಸ್ ಅನ್ನು ನಿಷೇಧಿಸಿ ಸ್ಪೀಕರ್ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ.
ಇಂದು ನಡೆದ ಘಟನೆಯಿಂದ ಕೆಲಕಾಲ ಸಂಸತ್ತಿನಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರೇಕ್ಷರ ಪಾಸ್ನ್ನು ನೀಡಲಾಗುವುದಿಲ್ಲ. ಇದೀಗ ಕಲಾಪ ಪುನರಾರಂಭಗೊಂಡಿದೆ. ಪ್ರಾಣತ್ಯಾಗಕ್ಕೂ ಸಿದ್ಧ ಆದರೆ ಕಲಾಪ ನಿಲ್ಲುವುದಿಲ್ಲ. ಸದನ ಅಂದೂ ನಡೆದಿತ್ತು, ಇಂದೂ ನಡೆಯಲಿದೆ ಎಂದಿದ್ದಾರೆ.