ಕಾಡಸಿದ್ದೇಶ್ವರ ಮಠದಲ್ಲಿ ಡಿಕೆಶಿಯಿಂದ ರಹಸ್ಯ ಪೂಜೆ!

dks
Published on

ತುಮಕೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್​ ಪಡೆದಿರುವ ಅಭ್ಯರ್ಥಿಗಳು ದೇವಸ್ಥಾನಗಳ ಮೊರೆ ಹೋಗುವುದು ಸಹಜ. ಕಾಂಗ್ರೆಸ್​​ ನಾಯಕ ಡಿ.ಕೆ ಶಿವಕುಮಾರ್​ ಅವರು ಕಾಡಸಿದ್ದೇಶ್ವರ ಮಠದಲ್ಲಿ ರಹಸ್ಯ ಪೂಜೆ ಮಾಡುತ್ತಿದ್ದಾರೆ.

ಎಲ್ಲರನ್ನೂ ಹೊರ ಕಳಿಸಿ ದಂಪತಿಗಳಷ್ಟೇ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಪತ್ನಿ ಉಷಾ ಜೊತೆ ಡಿಕೆ ಶಿವಕುಮಾರ್ ಪೂಜೆ ಮಾಡುತ್ತಿದ್ದಾರೆ.

ಹೆಲಿಕಾಪ್ಟರ್ ಮೂಲಕ ತಿಪಟೂರಿಗೆ ಪ್ರಚಾರಕ್ಕೆ ಆಗಮಿಸಿದ್ದ ಡಿಕೆ ಶಿವಕುಮಾರ್ ಅಲ್ಲಿಂದ ನೊಣವಿನಕೆರೆ ಮಠಕ್ಕೆ ಕಾರಿನ ಮೂಲಕ ಆಗಮಿಸಿದ್ದಾರೆ. ಬೆಂಗಳೂರಿನಿಂದ ಪತ್ನಿಯನ್ನ ಕಾರಿನಲ್ಲಿ ಮಠಕ್ಕೆ ಕರೆಸಿಕೊಂಡಿದ್ದಾರೆ.

ಮಠದಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾದ ದಂಪತಿ, ಕರಿವೃಷಭದೇಶಿಕೇಂದ್ರ ಶ್ರೀಗಳ ಸಮ್ಮುಖದಲ್ಲಿ ಗವಿಗುಡಿಯಲ್ಲಿ ಪೂಜೆ ನೇರವೆರಿಸಿದ್ದಾರೆ. ಎಲ್ಲರೂ ಪ್ರಚಾರಕ್ಕೆ ಹೋಗಿ ಎಂದು ಹೇಳಿ ದೇವಾಲಯ ಒಳಗೆ ಹೋದ ಡಿಕೆಶಿವಕುಮಾರ್ ಯಾರನ್ನೂ ದೇವಾಲಯ ಬಳಿಗೆ ಬಿಡದೇ ಪೂಜೆ ಮಾಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net