More

    ಕಾಫಿ ಬೀಜಗಳಲ್ಲಿ ಅಡಗಿರುವ ವ್ಯಕ್ತಿಯ ಮುಖವನ್ನು 8 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ..?

    ನವದೆಹಲಿ: ಆಪ್ಟಿಕಲ್ ಭ್ರಮೆಗಳು ನಿಮ್ಮ ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಕೌಶಲ್ಯಗಳನ್ನು ಹೆಚ್ಚಿಸುತ್ತವೆ. ಯಾಕೆ ಇಷ್ಟು ಜನಪ್ರಿಯವಾಗಿವೆ ಎಂದರೆ ನೀವು ಆಪ್ಟಿಕಲ್ ಭ್ರಮೆಯನ್ನು ಪರಿಹರಿಸಿದಾಗಲೆಲ್ಲಾ, ನೀವು ನಿಜವಾಗಿಯೂ ಸಂತೋಷವಾಗುತ್ತಿರ ಹಾಗೂ ನಿಮ್ಮ ಬುದ್ಧಿಶಕ್ತಿ ಹೆಚ್ಚಾಗುತ್ತದೆ.ನಿಮಗೆ ಸಾಧ್ಯವೇ? ಹಾಗಿದ್ದರೆ ನಿಮ್ಮ ಮೆದುಳಿಗೆ ಕೆಲಸ ಕೊಡಿ…

    ಈ ಚಿತ್ರದಲ್ಲಿ ಹುರಿದ ಕಾಫಿ ಬೀಜಗಳ ರಾಶಿಯನ್ನು ತೋರಿಸುತ್ತದೆ. ಕಾಫಿ ಬೀಜಗಳಲ್ಲಿ ಮಾನವನ ಮುಖ ಅಡಗಿದೆ. ಕಾಫಿ ಬೀಜಗಳಲ್ಲಿ ಅಡಗಿರುವ ಮುಖವನ್ನು 8 ಸೆಕೆಂಡುಗಳಲ್ಲಿ ಗುರುತಿಸುವುದು ನಿಮಗೆ ಇರುವ ಸವಾಲಾಗಿದೆ.ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಸವಾಲುಗಳು ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಉತ್ತಮ ಮಾರ್ಗವಾಗಿದೆ.

    ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲು; ಈ ತಟ್ಟೆಯಲ್ಲಿ ಎಷ್ಟು ಮೊಟ್ಟೆಗಳಿವೆ?

    ಮೊದಲ ನೋಟದಲ್ಲಿ ಮರೆಮಾಡಿದ ಮುಖವನ್ನು ಗುರುತಿಸಲು ಕಷ್ಟವಾಗುತ್ತದೆ. ಏಕೆಂದರೆ ಇದು ಕಾಫಿ ಬೀಜಗಳೊಂದಿಗೆ ಸಂಪೂರ್ಣವಾಗಿ ಮಿಶ್ರಣವಾಗಿದೆ. ನೀವು ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಕಾಫಿ ಬೀಜಗಳ ಮಧ್ಯೆ ಇರುವ ಮಾನವನ ಮುಖವನ್ನು ನೀವು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

    ದೃಷ್ಟಿ ಭ್ರಮೆ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

    ನೀವು ಈ ಸವಾಲಿನಲ್ಲಿ ಸೋತಿದ್ದೀರಾ ಎಂದಾದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಈ ಚಿತ್ರದಲ್ಲಿ ಮಾನವ ಮುಖವನ್ನು ಗುರುತಿಸಲಾಗಿದೆ. ಈ ಚಿತ್ರವನ್ನು ನೋಡಿ…ಉತ್ತರ ತಿಳಿದುಕೊಳ್ಳಿ.

    ಕಾಫಿ ಬೀಜಗಳಲ್ಲಿ ಅಡಗಿರುವ ವ್ಯಕ್ತಿಯ ಮುಖವನ್ನು 8 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ..?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts