

ಬೆಂಗಳೂರು: ರಾಜ್ಯಾದ್ಯಂತ ಸೋಮುವಾರ ನಡೆದ ಮೊದಲ ದಿನದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಸುಸೂತ್ರವಾಗಿ ನಡೆದಿದ್ದು. ಯಾವುದೇ ಪರೀಕ್ಷಾ ಅಕ್ರಮಗಳು ವರದಿಯಾಗಿಲ್ಲ.
ಕನ್ನಡ ಮತ್ತು ಅರೇಬಿಕ್ ವಿಷಯಗಳಿಗೆ ನೋಂದಣಿ ಮಾಡಿಕೊಂಡಿದ್ದ 36,448 ವಿದ್ಯಾರ್ಥಿಗಳಲ್ಲಿ 32,352 ಮಂದಿ ಹಾಜರಾಗಿದ್ದು, 4,096 ಮಂದಿ ಗೈರು ಹಾಜರಾಗಿದ್ದರು. ಒಟ್ಟಾರೆ ಶೇ.88.76 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.
ಮಂಗಳವಾರ ಐಚ್ಛಿಕ ಕನ್ನಡ, ರಸಾಯನಶಾಸ ಮತ್ತು ಮೂಲ ಗಣಿತ ವಿಷಯಗಳ ಪರೀಕ್ಷೆಗಳು ಮಧ್ಯಾಹ್ನದ ಅವಧಿಯಲ್ಲಿ ನಡೆಯಲಿವೆ.